5 ಪಾಲಿಕೆಗಳಲ್ಲಿ 771 ಕಿ.ಮೀ. ಫುಟ್‌ಪಾತ್ ಒತ್ತುವರಿ ತೆರವು
footpaths-cleared
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತಿಂಗಳ ಬಳಿಕವೂ ಮುಂದುವರಿದ ಕಾರ್ಯಾಚರಣೆ
ಕೇಂದ್ರ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ತೀವ್ರ ಕಾರ್ಯ
ಬೆಂಗಳೂರು: ರಾಜಧಾನಿಯಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ತಿಂಗಳ ಬಳಿಕವೂ ಮುಂದುವರಿದಿದ್ದು, ಈವರೆಗೆ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ 771.83 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಒತ್ತುವರಿಮುಕ್ತಗೊಳಿಸಲಾಗಿದೆ.
ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಅತಿಹೆಚ್ಚು 195.85 ಕಿ.ಮೀ. ಉದ್ದದಷ್ಟು ಒತ್ತುವರಿ ತೆರವುಗೊಳಿಸಲಾಗಿದೆ. ಉತ್ತರ ಪಾಲಿಕೆ - 178.55 ಕಿ.ಮೀ., ಪಶ್ಚಿಮ ಪಾಲಿಕೆ - 168.37 ಕಿ.ಮೀ., ದಕ್ಷಿಣ ಪಾಲಿಕೆ - 116.76 ಕಿ.ಮೀ. ಹಾಗೂ ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 116.65 ಕಿ.ಮೀ. ಒತ್ತುವರಿ ಮುಕ್ತಗೊಳಿಸಲಾಗಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಪಾಲಿಕೆಯಲ್ಲಿ 5 ಕಿ.ಮೀ. ತೆರವು:
ಸೋಮವಾರ ಕೇಂದ್ರ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ/ಕಾರ್ಮಿಕರು 6 ಪ್ರಮುಖ ರಸ್ತೆಗಳ 5.05 ಕಿ.ಮೀ. ಉದ್ದದಷ್ಟು ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿದರು. ಈ ವೇಳೆ 8 ಟನ್ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.
ಶಿವಾಜಿನಗರ ವಿಭಾಗದಲ್ಲಿ ಪಿ.ಕಾಳಿಂಗ ರಾವ್ ರಸ್ತೆ ಹಾಗೂ ಕಸ್ತೂರ ಬಾ ರಸ್ತೆಯ 1.35 ಕಿ.ಮೀ., ಚಾಮರಾಜಪೇಟೆಯ ಜಗಜೀವನ್ ರಾಮ್ ನಗರ ಮುಖ್ಯರಸ್ತೆಯಲ್ಲಿ 1 ಕಿ.ಮೀ., ಗಾಂಧಿನಗರ ವಿಭಾಗದ ಮಲ್ಲೇಶ್ವರದ 8ನೇ ಅಡ್ಡರಸ್ತೆಯಲ್ಲಿ 1 ಕಿ.ಮೀ., ಶಾಂತಿನಗರ ವಿಭಾಗದಲ್ಲಿ 0.50 ಕಿ.ಮೀ. ಹಾಗೂ ಸರ್ ಸಿ.ವಿ.ರಾಮನ್‌ನಗರ ವಿಭಾಗದ 1.20 ಕಿ.ಮೀ. ಉದ್ದದಷ್ಟು ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ಉತ್ತರ ಪಾಲಿಕೆಯಲ್ಲಿ 2 ಕಿ.ಮೀ. ತೆರವು:
ಅಭಿಯಾನ ಆರಂಭವಾದಾಗಿನಿಂದಲೂ ನಿರಂತರವಾಗಿ ತೆರವು ಕಾರ್ಯಾಚರಣೆ ಕೈಗೊಳ್ಳುತ್ತಿರುವ ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಸೋಮವಾರ 2 ಕಿ.ಮೀ. ಉದ್ದದಷ್ಟು ಪಾದಚಾರಿ ಮಾರ್ಗವನ್ನು ಒತ್ತುವರಿಮುಕ್ತಗೊಳಿಸಲಾಯಿತು. ಯಲಹಂಕ ವಿಭಾಗದ ಮಾತೃ ಲೇಔಟ್‌ನಲ್ಲಿ 0.50 ಕಿ.ಮೀ., ಹಾಗೂ ದಾಸರಹಳ್ಳಿ ವಿಭಾಗದ ಸಿಡದೇಹಳ್ಳಿ ಮುಖ್ಯರಸ್ತೆಯಲ್ಲಿ 1.50 ಕಿ.ಮೀ. ತೆರವು ಕಾರ್ಯ ನಡೆಯಿತು. ಈ ವೇಳೆ 44 ಟನ್ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಪಾಲಿಕೆಯಲ್ಲಿ 1.20 ಕಿ.ಮೀ. ತೆರವು:
ನಗರದ ಹಳೆಯ ಪ್ರದೇಶಗಳನ್ನು ಒಳಗೊಂಡಿರುವ ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಸೋಮವಾರ 1.20 ಕಿ.ಮೀ. ಉದ್ದದಷ್ಟು ಒತ್ತುವರಿಮುಕ್ತ ಮಾಡಲಾಗಿದೆ. ಜಯನಗರ ವಲಯದ 9, 10ನೇ ಮುಖ್ಯರಸ್ತೆಯಲ್ಲಿ 0.50 ಕಿ.ಮೀ. ಹಾಗೂ ಎಚ್‌ಎಸ್‌ಆರ್ ವಿಭಾಗದ 31ನೇ ಮುಖ್ಯರಸ್ತೆಯಲ್ಲಿ 0.70 ಕಿ.ಮೀ. ಉದ್ದ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲಾಯಿತು.