ಆರ್‌ಐಎಂಎಸ್ ವ್ಯವಸ್ಥೆಯು ರಸ್ತೆ ಕಾಮಗಾರಿಗಳ ಮಾಹಿತಿಯಲ್ಲಿನ ದೋಷ ಮತ್ತು ಅಸಮರ್ಪಕತೆ ಕಡಿಮೆಗೊಳಿಸುವುದು, ಪ್ರಕ್ರಿಯೆಯ ಹರಿವನ್ನು ಉತ್ತಮಗೊಳಿಸುವುದು ಹಾಗೂ ಎಐ ಆಧಾರಿತ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ ರಸ್ತೆ ಅಭಿವೃದ್ಧಿ ಯೋಜನೆ, ಕಾಮಗಾರಿಗಳ ಮೇಲ್ವಿಚಾರಣೆ, ಹೂಡಿಕೆ ಆದ್ಯತೆ ನಿಗದಿ ಹಾಗೂ ಸಾರ್ವಜನಿಕ ಪಾರದರ್ಶಕತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ.