

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:
ಹೆಂಡತಿಯಿಂದ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳ ಅನುಭವಿಸುತ್ತಿದ್ದೇನೆ. ಆಕೆಯ ಜತೆ ಬಾಳಲು ಸಾಧ್ಯವಿಲ್ಲ ಎಂದು ಪತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್, ವಿಚ್ಛೇದನ ಮಂಜೂರು ಮಾಡಿ ಆದೇಶಿಸಿದೆ. ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಅರ್ಜಿಯನ್ನು ರದ್ದುಗೊಳಿಸಿದ್ದು, ಪತ್ನಿಯು ಪತಿಯ ಮೇಲೆ ಕ್ರೌರ್ಯ ಎಸಗಿರುವುದು ಮತ್ತು ತೊರೆದು ಹೋಗಿರುವುದು ಸಾಬೀತಾಗಿದೆ ಎಂದು ಹೇಳಿದೆ.
ℹ️
ಆರೋಪ ನಿರಾಕರಿಸಿದ್ದ ಪತ್ನಿ
ತನ್ನ ವಿರುದ್ಧ ಪತಿ ಮಾಡಿದ ಆರೋಪಗಳನ್ನು ಪತ್ನಿ ನಿರಾಕರಿಸಿದ್ದರು. ಪತಿಯೇ ವರದಣೆ ಕಿರುಕುಳ ಆರಂಭಿಸಿದ್ದ. ಆತನ ಕಿರುಕುಳದ ಕಾರಣ ನಾನು ಉದ್ಯೋಗ ಕೂಡ ತ್ಯಜಿಸಬೇಕಾಯಿತು. ನನ್ನ ಚಾರಿತ್ರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಓಡಾಟಕ್ಕೆ ರ್ನಿಬಂಧ ಹೇರಿದ್ದ. ಇಬ್ಬರು ಹೆಣ್ಣು ಮಕ್ಕಳು ಜನಿಸಿದ ಕಾರಣ ಗಂಡು ಮಗು ಬೇಕು ಎಂದು ಎರಡನೇ ಮದುವೆಯ ಬೆದರಿಕೆ ಹಾಕಿದ್ದ. ಮಕ್ಕಳನ್ನು ಆರೈಕೆ ಮಾಡಲು ಅವಕಾಶ ನೀಡದೆ, ಅಂತರ ಸೃಷ್ಟಿಸಿದ್ದಾನೆ. ಆದರೂ, ನಾನು ಪತಿಯೊಂದಿಗೆ ಜೀವನ ಸಾಗಿಸಲು ಸಿದ್ಧಳಿದ್ದೇನೆ ಎಂದು ಪತ್ನಿ ವಾದಿಸಿದ್ದರು.