ಕಾಯ್ದೆ ತಿದ್ದುಪಡಿಗೆ ಗುತ್ತಿಗೆದಾರರ ಖಂಡನೆ

ಬೆಸ್ಕಾಂ ಕಾಯ್ದೆಗೆ ತಿದ್ದುಪಡಿ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಪೀಠಾಧಿಪತಿ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರನ್ನು  ರಾಜ್ಯ ಅನುಮತಿ ಪಡೆದ ವಿದ್ಯುತ್​ ಗುತ್ತಿಗೆದಾರರ ಸಂದ ಸದಸ್ಯರು ಭೇಟಿ ಮಾಡಿ ಮನವಿ ಮಾಡಿದರು.
ಬೆಸ್ಕಾಂ ಕಾಯ್ದೆಗೆ ತಿದ್ದುಪಡಿ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಪೀಠಾಧಿಪತಿ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರನ್ನು ರಾಜ್ಯ ಅನುಮತಿ ಪಡೆದ ವಿದ್ಯುತ್​ ಗುತ್ತಿಗೆದಾರರ ಸಂದ ಸದಸ್ಯರು ಭೇಟಿ ಮಾಡಿ ಮನವಿ ಮಾಡಿದರು.
Published on
ಬೆಂಗಳೂರು: ಬೆಸ್ಕಾಂ 4.6 ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವುದನ್ನು ನಿಲ್ಲಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗೆ ರಾಜ್ಯ ಅನುಮತಿ ಪಡೆದ ವಿದ್ಯುತ್​ ಗುತ್ತಿಗೆದಾರರ ಸಂದ ಸದಸ್ಯರು ಮನವಿ ಮಾಡಿದ್ದಾರೆ.
ತಿಪಟೂರು ತಾಲೂಕಿನ ನೊಣವಿನ ಕೆರೆ ಕಾಡಸಿದ್ದೇಶ್ವರ ಮಠದ (ಅಜ್ಜಯ್ಯ ಮಠ) ಪೀಠಾಧಿಪತಿ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಅಶೀರ್ವಾದ ಪಡೆದು ಸಮಸ್ಯೆಗೆ ಸ್ಪಂದಿಸುವಂತೆ ಕೋರಿದರು.
ಸಂದ ಮಾಜಿ ಪ್ರಧಾನ ಕಾರ್ಯದರ್ಶಿ ರುದ್ರೇಶ್​ ಮಾತನಾಡಿ, ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವುದರಿಂದ ಗುತ್ತಿಗೆದಾರರಿಗೆ ಅನನುಕುಲವಾಗಲಿದೆ. ಇದರಿಂದ ಗುತ್ತಿಗೆದಾರರು, ಕಾರ್ಮಿಕರ ಕುಟುಂಬಗಳು ಬೀದಿಪಾಲಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಗುತ್ತಿಗೆದಾರ ಕಟ್ಟಡದ ಗಾತ್ರ ನೋಡಿ ಅಂದಾಜು ಪಟ್ಟಿ ತಯಾರಿಸುತ್ತಾನೆ. ಅದರಂತೆ ವಿದ್ಯುತ್​ ಉಪಕರಣ ಅಳವಡಿಸಿ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಾನೆ. ಇದರ ಹಿಂದೆ ವೈರ್​ ಮ್ಯಾನ್​, ಕಾರ್ಮಿಕ, ಮೇಲ್ವಿಚಾರಕ, ಇಂಜಿನಿಯರ್​ ಶ್ರಮ ಇರುತ್ತದೆ. ಇವರೆಲ್ಲ ಸರ್ಕಾರದಿಂದ ಲೈಸನ್ಸ್​ ಪಡೆದಿರುವವರು ಆಗಿರುತ್ತಾರೆ. ಇದೀಗ ಕಟ್ಟಡದ ಮಾಲೀಕನೇ ಮಾಪನ ವರದಿ ನೀಡಬೇಕು ಎಂದು ನಿಯಮ ವಿಧಿಸುತ್ತಿರುವುದು ಸರಿಯಲ್ಲ. ಈ ಕುರಿತು ಸಚಿವರ ಗಮನಕ್ಕೂ ತರಲಾಗಿದ್ದು, ಸಿಎಂ ಭೇಟಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಮ್ಮ ಮೂಲಕ ಒತ್ತಡ ಹೇರಿಸಲಾಗುತ್ತಿದೆ. ಸಮಸ್ಯೆಗೆ ಸ್ಪಂದಿಸಬೇಕು ಎಂದು ಕೋರಿದರು.
ವಿದ್ಯುತ್​ ಗುತ್ತಿಗೆದಾರರಾದ ಬಿ.ವಿ.ನರಸಿಹಯ್ಯ, ಬಸವರಾಜ್​, ವೆಂಕಟೇಶಯ್ಯ, ಪಾಂಡು, ಮೋಹನ್​ ಗೌಡ, ಜಿಲ್ಹಾನ್​, ಕೃಷ್ಣಪ್ಪ, ಚಂದ್ರಹಾಸ, ಗಣೇಶ್​, ಮಲ್ಲಪ್ಪ, ಚಂದ್ರಣ್ಣ, ದಾದಾಪೀರ್​, ಕುಮಾರ್​, ಕೆಂಚಪ್ಪ, ವೇದಮೂರ್ತಿ, ಶ್ರೀಧರ್​, ಚೇತನ್​, ವಜೀದ್​, ದಾಸರಹಳ್ಳಿ ಶಿವದೇವಾಲಯ ಅಧ್ಯಕ್ಷ ವಿ.ಎನ್​.ಸಿದ್ದಗಂಗಯ್ಯ, ದೇವಾಲಯದ ಟ್ರಸ್ಟಿ ನಾಗೇಶ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net