31ರಂದು 15 ಗಂಟೆ ಕಾವೇರಿ ನೀರು ಪೂರೈಕೆ ಸ್ಥಗಿತ

ಜಲಮಂಡಳಿ
ಜಲಮಂಡಳಿ
Published on
ಬೆಂಗಳೂರು: ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ 3000 ಮಿ.ಮೀ. ವ್ಯಾಸದ ಮುಖ್ಯ ಕೊಳವೆ ಮಾರ್ಗದಲ್ಲಿನ ಸ್ಕೌರ್​ ವಾಲ್ವ್​ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್​ಎಸ್​ಬಿ) ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ(ಜು.31) ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೆ ಒಟ್ಟು 15 ಗಂಟೆಗಳ ಕಾಲ ಜಲರೇಚಕ ಯಂತ್ರಾಗಾರಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.
ಯಂತ್ರಾಗಾರಗಳ ಸ್ಥಗಿತದಿಂದ ನಗರದ ಉತ್ತರ, ಪೂರ್ವ, ದಕ್ಷಿಣ ಹಾಗೂ ಆಗ್ನೇಯ ಭಾಗಗಳ ಅನೇಕ ಬಡಾವಣೆಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಮಂಡಳಿ ತಿಳಿಸಿದೆ.
ನೀರು ಪೂರೈಕೆ ವ್ಯತ್ಯಯವಾಗುವ ಪ್ರದೇಶಗಳು:
ಅನಂತಪುರ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಹಾರೋಹಳ್ಳಿ, ಕೆಂಚನಹಳ್ಳಿ, ಗೋವಿಂದಪುರ, ವಾಸುದೇವಪುರ, ಮಂಚೇನಹಳ್ಳಿ, ಕಟ್ಟಿಗೇನಹಳ್ಳಿ, ಶ್ರೀನಿವಾಸಪುರ, ಬೆಳ್ಳಳ್ಳಿ, ತಿರುಮೆನಹಳ್ಳಿ, ಚೊಕ್ಕನಹಳ್ಳಿ, ದಾಸರಹಳ್ಳಿ, ರಾಚೇನಹಳ್ಳಿ, ಥಣೀಸಂದ್ರ, ಚಳ್ಳೆಕೇರೆ, ಹೊರಮಾವು ಆಗರ, ಅಮಾನಿ, ಬೈರತಿಖಾನೆ, ಗೆದ್ದಲಹಳ್ಳಿ, ಕೊತ್ತನೂರು ನಾರಾಯಣಪುರ, ಕೊತ್ತನೂರು, ಎನ್​. ನಾಗೇನಹಳ್ಳಿ, ಕೈಲಾಸನಹಳ್ಳಿ, ಬೈರತಿ, ಬಿಳಿಶಿನಹಳ್ಳಿ, ಬಳಗೆರೆ, ಬೆಳ್ಳಂದೂರು ಅಮಾನಿಕೆರೆ, ಬೆಳತ್ತೂರು, ಬೆನ್ನಸಂದ್ರ, ದೇವರಬೀಸನಹಳ್ಳಿ, ಅಬ್ಬಿಗೆರೆ, ಚಿಕ್ಕಸಂದ್ರ, ಶೆಟ್ಟಿಹಳ್ಳಿ, ಕರಿಹೋಬನಹಳ್ಳಿ, ಅಂಧರಹಳ್ಳಿ, ಮ್ಯಾಡರಹಳ್ಳಿ, ದೊಡ್ಡಬಿದರಕಲ್ಲು, ಲಿಂಗಧೀರನಹಳ್ಳಿ, ಹೆರೋಹಳ್ಳಿ, ಹೊಸಹಳ್ಳಿ, ಗುಂಜೂರು, ಅಗದೂರು, ಕಾಡಬೀಸನಹಳ್ಳಿ, ಕಾಯಮ್ಮನ ಅಗ್ರಹಾರ, ಕಾಡುಗೋಡಿ ಪ್ಲಾಂಟೇಶನ್​, ಕಾಣೇಕಂಡ್ಯ, ಕುಂಬೇನ ಅಗ್ರಹಾರ, ನಾಗೊಂಡಹಳ್ಳಿ, ಪಣತ್ತೂರು, ರಾಮಗೊಂಡನಹಳ್ಳಿ, ಸಿದ್ದಾಪುರ, ಸೋರಹುಣಸೆ, ತುಬರಹಳ್ಳಿ, ವರ್ತೂರು, ಕಲ್ಕರೆ, ಹೋರಮಾವು, ಕೆ. ಚೆನ್ನಸಂದ್ರ, ವಾರಣಾಸಿ, ವಸಂತಪುರ, ಉಲ್ಲಾಳ, ಸೋಣ್ಣೆನಹಳ್ಳಿ, ಗಾಣಕಲ್ಲು, ಹೆಮ್ಮಿಗೆಪುರ, ಸೋಮಪುರ, ವಾರಸಂದ್ರ, ಮನವರ್ತಕಾವಲು, ಅರೇನಹಳ್ಳಿ, ವಡ್ಡರಪಾಳ್ಯ, ಉತ್ತರಹಳ್ಳಿ, ಸುಬ್ರಮಣ್ಯಪುರ, ಗುಬ್ಬಲಾಳ, ತುರಹಳ್ಳಿ, ಗಿಡದಕೋನೆನಹಳ್ಳಿ, ಆಲಹಳ್ಳಿ, ಅಂಬಲಿಪುರ, ಅಂಜನಾಪುರ, ಬಸಪುರ, ಬಸವನಪುರ, ಬೇಗೂರು, ಬೆಳ್ಳಂದೂರು, ಚಂದ್ರಶೇಖರಪುರ, ದೊಡ್ಡಕಲ್ಲಸಂದ್ರ, ಗೊಲ್ಲಹಳ್ಳಿ, ಗೊಟ್ಟಿಗೆರೆ, ಅರಳೂರು, ಜುನಸಂದ್ರ, ಕೈಕೊಂಡನಹಳ್ಳಿ, ಕಾಳೇನ ಅಗ್ರಹಾರ, ಕಂಬತ್ತಹಳ್ಳಿ, ಕಮ್ಮನಹಳ್ಳಿ, ಕಸವನಹಳ್ಳಿ, ಕೂಡಲು, ಪರಪ್ಪನ ಅಗ್ರಹಾರ, ಪಿಳ್ಳಗಾನಹಳ್ಳಿ, ರಘುವನಹಳ್ಳಿ, ತಲಘಟ್ಟಪುರ, ತಿಪ್ಪಸಂದ್ರ, ವಾಜರಹಳ್ಳಿ, ಯಲೇನಹಳ್ಳಿ, ಭರತೇನ ಅಗ್ರಹಾರ, ಬೋಗನಹಳ್ಳಿ, ಚಿಕ್ಕಬೆಳ್ಳಂದೂರು, ಚಿಕ್ಕತೇಗೂರು, ದೊಡ್ಡಕನ್ನಹಳ್ಳಿ, ದೊಡ್ಡತೇಗೂರು, ನಾಗನಾಥಪುರ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net