

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುವವರ ವಿರುದ್ಧ ಕೇಂದ್ರ ತನಿಖಾ ದಳದ ಕಾರ್ಯಾಚರಣೆ ಮುಂದುವರಿಸಿದ್ದು, ಜುಲೈನಲ್ಲಿ 19,380 ಟ್ರಿಪ್ಗಳನ್ನು ತಪಾಸಣೆ ನಡೆಸಿ 2,748 ಟಿಕೆಟ್ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿದೆ. ಇವರಿಂದ ಒಟ್ಟು 6.23 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ತನಿಖೆ ವೇಳೆ ನಿಯಮ ಉಲ್ಲಂಘಿಸಿದ ಬಿಎಂಟಿಸಿ ನಿರ್ವಾಹಕರ ವಿರುದ್ಧ 1,559 ಪ್ರಕರಣಗಳನ್ನು ದಾಖಲಿಸಲಾಗಿದೆ.
27ರಿಂದ 366-ಎಬಿ ಹೊಸ ಮಾರ್ಗದಲ್ಲಿ ಬಸ್ ಸಂಚಾರ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೊಸ ಮಾರ್ಗವನ್ನು ಪರಿಚಯಿಸುತ್ತಿದ್ದು, ಹವಾನಿಯಂತ್ರಣ ರಹಿತ ಬಸ್ ಸೇವೆಯಡಿ 366-ಎಬಿ ಮಾರ್ಗವನ್ನು ಆ.27ರಿಂದ ಕಾರ್ಯಾರಂಭ ಮಾಡಲಾಗುತ್ತಿದೆ. ಕೃಷ್ಣ್ಣರಾಜೇಂದ್ರ ಮಾರುಕಟ್ಟೆಯಿಂದ ಬಿಳೇಕಹಳ್ಳಿ ಗ್ರಾಮದವರೆಗೆ ಬಸ್ಗಳು ಸಂಚರಿಸಲಿವೆ.
ವೇಳಾಪಟ್ಟಿ: