ಅಡಿಗಾಸ್ ಯಾತ್ರಾ ಸಂಸ್ಥೆಗೆ ಅತ್ಯುತ್ತಮ ಟೂರ್ ಆಪರೇಟರ್ ಪ್ರಶಸ್ತಿ

ಪ್ರವಾಸೋದ್ಯಮ ಇಲಾಖೆ,ಎಫ್‌ಕೆಸಿಸಿಐ ಆಶ್ರಯದಲ್ಲಿ ಪ್ರದಾನ
The 'Best Tour Operator' award, presented under the aegis of the State Tourism Department and FKCCI, was awarded to Adigas Yatra. Former Minister M.R. Jayaram, FKCCI President Uma Reddy, and others were present.
ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಎಫ್​ಕೆಸಿಸಿಐ ಆಶ್ರಯದಲ್ಲಿ ಕೊಡ ಮಾಡುವ ಅತ್ಯುತ್ತಮ ಟೂರ್ ಆಪರೇಟರ್ ಪ್ರಶಸ್ತಿಯನ್ನು ಅಡಿಗಾಸ್‌ಯಾತ್ರಾ ಸಂಸ್ಥೆಗೆ ನೀಡಲಾಯಿತು. ಮಾಜಿ ಸಚಿವ ಎಂ.ಆರ್.ಜಯರಾಮ್, ಎ್ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಮತ್ತಿತರರಿದ್ದರು.
Published on

ಬೆಂಗಳೂರು : ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸತತ 32 ವರ್ಷಗಳಿಂದ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಅಡಿಗಾಸ್ ಯಾತ್ರಾ ಸಂಸ್ಥೆಗೆ ಅತ್ಯುತ್ತಮ ಟೂರ್ ಆಪರೇಟರ್ ಪ್ರಶಸ್ತಿ ಲಭಿಸಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಫ್‌ಕೆಸಿಸಿಐ) ಆಶ್ರಯದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಡಿಗಾಸ್ ಯಾತ್ರಾ ಸಂಸ್ಥೆಯು ಹಲವು ವರ್ಷಗಳಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅಡಿಗಾಸ್ ಸಂಸ್ಥೆಯ ಪ್ರತಿನಿಧಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿಯ ಅಧ್ಯಕ್ಷ ಪಿ.ಕೆ. ಮುರುಗನ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪ್ರವಾಸಿಗರಿಗೆ ವಿವಿಧ ಪ್ರವಾಸಿ ತಾಣಗಳ ಪರಿಚಯ, ಪ್ರವಾಸ ಆಯೋಜನೆ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸೇವೆಗಳನ್ನು ನಿರಂತರವಾಗಿ ಒದಗಿಸುತ್ತಿರುವ ಅಡಿಗಾಸ್ ಸಂಸ್ಥೆಯ ಮೂರು ದಶಕಗಳಿಗೂ ಹೆಚ್ಚಿನ ಸೇವೆಗೆ ಈ ಪ್ರಶಸ್ತಿ ಗೌರವ ಸಂದಿದ್ದು, ಸಂಸ್ಥೆಗೆ ಮತ್ತೊಂದು ಗರಿಮೆ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net