ಬೆಂಗಳೂರಿನಲ್ಲಿ ಹೆಣ್ಮಕ್ಕಳಿಗಿಲ್ವಾ ಸುರಕ್ಷತೆ?; ರಾತ್ರಿ ಕ್ಯಾಬ್​ಗಾಗಿ ಕಾಯ್ತಿದ್ದ ಯುವತಿ; ‘10 ಸಾವಿರ ಕೊಡ್ತಿನಿ ಬಾ’ ಎಂದವನ ಬಂಧನ​​​..Bengaluru

Bengaluru man harasses woman waiting for cab
Bengaluru man harasses woman waiting for cab
Published on

ಪ್ರಮುಖ ಮುಖ್ಯಾಂಶಗಳು

  • ಕ್ಯಾಬ್​ಗಾಗಿ ಕಾಯುತ್ತಿದ್ದ ಯುವತಿಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಹಣ್ಣು ಮಾರಾಟಗಾರ
  • ರಾಮಮೂರ್ತಿ ನಗರದ ಎನ್‌ಆರ್‌ಐ ಲೇಔಟ್‌ನ ನಿವಾಸಿ 42 ವರ್ಷದ ವಿಜಯ್​​ ರಾಘವ್‌ ಬಂಧನ
  • ಒಂಟಿಯಾಗಿ ನಿಂತಿದ್ದ ಯುವತಿಗೆ ನಿನ್ನ ರೇಟ್ ಎಷ್ಟು ಎಂದವ ಪೊಲೀಸರ ಅತಿಥಿ
ಬೆಂಗಳೂರಿನಲ್ಲಿ ರಾತ್ರಿ ವೇಳೆ ಮಹಿಳೆಯರು ಒಬ್ಬಂಟಿಯಾಗಿ ಓಡಾಡೋದು ಎಷ್ಟು ಕಷ್ಟ ಎನ್ನುವುದನ್ನು ಇತ್ತೀಚೆಗೆ ಬಿಗ್​ಬಾಸ್​ನ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್​ ಅವರು ತಮಗಾದ ಅನುಭವದ ಬಗ್ಗೆ ವಿಡಿಯೋ ಹಂಚಿಕೊಂಡಿದ್ದರು. ಆ ಬೆನ್ನಲ್ಲೇ ನಗರದ ರಾಮಮೂರ್ತಿನಗರದಲ್ಲಿ  ಕ್ಯಾಬ್​ಗಾಗಿ ಕಾಯುತ್ತಿದ್ದ ಯುವತಿಗೆ ನಿನ್ನ ರೇಟ್​ ಎಷ್ಟು ಎಂದು ಕೇಳಿದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ರಾತ್ರಿ  ಯುವತಿಯೊಬ್ಬರು ಕ್ಯಾಬ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಸ್ಕೂಟಿಯಲ್ಲಿ ಬಂದ ವ್ಯಕ್ತಿಯೊಬ್ಬ ನಿನ್ನ ರೇಟ್​ ಎಷ್ಟು ಎಂದು ಕೇಳಿದ್ದಾನೆ ಎಂದು ಎಕ್ಸ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಆ ಮಾಹಿತಿ ಮೇರೆಗೆ ತನಿಖೆ ನಡೆಸಿದ ಪೊಲೀಸರು ಸದ್ಯ ಕಾಮುಕನನ್ನು ಬಂಧಿಸಿದ್ದಾರೆ.

ಹಣ್ಣು ಮಾರಾಟಗಾರ ಅರೆಸ್ಟ್

ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ರಾಮಮೂರ್ತಿ ನಗರದ ಎನ್‌ಆರ್‌ಐ ಲೇಔಟ್‌ನ ನಿವಾಸಿ 42 ವರ್ಷದ ವಿಜಯ್​​ ರಾಘವ್‌ ಎಂದು ಗುರುತಿಸಲಾಗಿದೆ. ಈತ ಹಣ್ಣು ಮಾರಾಟಗಾರ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ, ಆತ ಬಳಕೆ ಮಾಡಿದ್ದ ಸ್ಕೂಟರ್​ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವತಿ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ? 

ಕ್ಯಾಬ್​ಗಾಗಿ ಕಾಯುತ್ತಿದ್ದ ವೇಳೆ ಸ್ಕೂಟಿಯಲ್ಲಿ ಬಂದ ವ್ಯಕ್ತಿ ನನ್ನನ್ನು ಕಂಡು ಗಾಡಿ ನಿಲ್ಲಿಸಿದ. ಆನಂತರ ನಿನ್ನ ರೇಟ್​ ಎಷ್ಟು ಸಾವಿರನಾ ಎಂದು ಕೇಳಿದೆ. ಸಾವಿರ ಯಾವುದಕ್ಕೆ ಎಂದು ಈಕೆ ಕೇಳಿದ್ದಾಳೆ.ಅಶ್ಲೀಲವಾಗಿ ಮಾತನಾಡುತ್ತಾ, ದರ ಕೇಳಿ 10,000 ನೀಡುವುದಾಗಿ ಹೇಳಿದ್ದಾನೆ. ಆಕೆ ವಿಡಿಯೋ ರೆಕಾರ್ಡ್​ ಮಾಡುತ್ತಿರುವುದನ್ನು ಕಂಡ ಆತ  ಆಕೆಯನ್ನು ನಿಂದಿಸಿ  ಪರಾರಿಯಾಗಿರುವುದು ವಿಡಿಯೋದಲ್ಲಿ ಇದೆ. ಸದ್ಯ ಈ ವಿಡಯೋ ಎಕ್ಸ್​ ಸೇರಿದಂತೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. 
ಮಹಿಳೆ ಕೊಟ್ಟಿರುವ ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡು, ಸ್ಕೂಟರ್​ ನಂಬರ್​ ಪ್ಲೇಟ್​ ಆಧರಿಸಿ ಆತ ಯಾರು ಎಲ್ಲಿದ್ದಾನೆ ಎಂದು ಪತ್ತೆ ಹಚ್ಚಿದ್ದಾರೆ. ಆತ ಬಳಕೆ ಮಾಡಿದ್ದ ಸ್ಕೂಟರ್​ ಸಹ ಆತನದಲ್ಲ ಎನ್ನುವುದು ತಿಳಿದು ಬಂದಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net