ಈ ವೇದಿಕೆಯು ಪ್ರಾಧಿಕಾರ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳ ಮಾಲೀಕರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಹಾಗೂ ಸಾರ್ವಜನಿಕ ಅಧಿಕಾರಿಗಳೊಂದಿಗೆ ಸಂಬಂಧ ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಗುಂಜೂರು, ಕೊಮ್ಮಘಟ್ಟ, ಕಣಿಮಿಖೆ, ಜ್ಞಾನಭಾರತಿ, ಕೋನದಾಸಪುರ, ತಿಪ್ಪಸಂದ್ರ ಸೇರಿ ಇತರ ಸ್ಥಳಗಳಲ್ಲಿ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿರುವ ಸಮಾನ ಮನಸ್ಕ ಮಾಲೀಕರು ಒಗ್ಗೂಡಿ ವೇದಿಕೆ ರಚಿಸಿಕೊಂಡಿದ್ದೇವೆ ಎಂದು ಫೋರಂನ ಪದಾಧಿಕಾರಿಗಳು ತಿಳಿಸಿದ್ದಾರೆ.