ಅಲ್ಲದೆ ಈ ಹಿಂದೆ ಎಲ್ ಆ್ಯಂಡ್ ಟಿ ಕಂಪನಿಯು ಬಿಎಸ್‌ಆರ್‌ಪಿ ಯೋಜನೆಯ ಕಾರಿಡಾರ್ 2 ಮತ್ತು 4ರ ಒಪ್ಪಂದಗಳನ್ನು ರದ್ದುಪಡಿಸಿ, ಬ್ಯಾಂಕ್ ಗ್ಯಾರಂಟಿ ವಶಪಡಿಸಿಕೊಳ್ಳುವುದನ್ನು ತಡೆಯಲು ವಾಣಿಜ್ಯ ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಆದೇಶವನ್ನು ಪಡೆದಿತ್ತು. ಅಲ್ಲದೆ, ಒಪ್ಪಂದದ ಅರ್ಬಿಟ್ರೇಷನ್ ವಿಧಿಯನ್ನು ಬಳಸಿಕೊಂಡು, ತನ್ನ ದಾವೆಗಳನ್ನು ಮುಂದಿಟ್ಟಿತ್ತು. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನಿವತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಅರ್ಬಿಟ್ರೇಷನ್ ಟ್ರಿಬ್ಯುನಲ್ ರಚಿಸಲಾಗಿತ್ತು. ನಂತರ, ವಾಣಿಜ್ಯ ನ್ಯಾಯಾಲಯವು ಎಲ್ಲ ವಿಷಯಗಳನ್ನು ಈ ಪ್ರಾಧಿಕಾರಕ್ಕೆಕ ವರ್ಗಾಯಿಸಿತು.