ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಸಾಕಷ್ಟು ಮಹತ್ವವನ್ನು ವಹಿಸುತ್ತದೆ. ಕ್ರೀಡೆ ಶಿಸ್ತು, ಸಂಯಮ, ತಾಳ್ಮೆ, ಸೋಲು, ಸತತ ಪ್ರಯತ್ನಗಳನ್ನು ಕಲಿಸುತ್ತದೆ. ಕ್ರೀಡೆ ನಾಯಕತ್ವ, ಗುಂಪಾಗಿ ಆಡುವ ಮನೋಭಾವ, ಗೆಲುವಿಗಾಗಿ ಶ್ರಮಿಸುವ ಗುಣ ಬೆಳೆಸುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಧೃಡವಾಗಿರಲು ಕ್ರೀಡೆ ಅತ್ಯವಶ್ಯಕವಾಗಿದೆ. 21ನೇ ಶತಮಾನದಲ್ಲಿ ಕ್ರೀಡೆ ಅದ್ಬುತ ಕೌಶಲವಾಗಿದೆ, ವಿಶ್ವವಿದ್ಯಾಲಯ ಮಟ್ಟದಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಕ್ರೀಡೆಗೆ ಆಸಕ್ತಿ ತೋರಬೇಕು ಎಂದು ಕಿವಿಮಾತು ಹೇಳಿದರು.