ಕಳೆದ ತಿಂಗಳು ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ವರು ದಾಖಲೆ ಸಮೇತ ಕೆ.ಎಸ್. ಮಂಜುಳಾ ವಿರುದ್ಧ ದೂರು ಸಲ್ಲಿಸಿದ್ದರು. ಮೇಲಾಧಿಕಾರಿಗಳ ಒಪ್ಪಿಗೆ ಪಡೆಯದೆ ಸ್ವಯಂ ನಿರ್ಧಾರ ಕೈಗೊಂಡು ಅಕ್ರಮ ಬಡಾವಣೆಯ ಸೈಟ್‌ಗಳಿಗೆ ಎ ಖಾತಾ ನೀಡಿ ಪಾಲಿಕೆಗೆ ಮುಜುಗರ ಉಂಟು ಮಾಡಿದ್ದರು. ದೂರು ಹಿನ್ನೆಲೆಯಲ್ಲಿ ಮಂಜುಳಾ ಅವರಿಗೆ ನೋಟಿಸ್ ನೀಡಿ ಸಮಜಾಯಿಷಿ ಕೇಳಲಾಗಿತ್ತು. ಬಳಿಕ ವಲಯದ ಹಿರಿಯ ಅಧಿಕಾರಿಗಳಿಂದ ಕಡತ ತರಿಸಿ ಆಗಿರುವ ತಪ್ಪುಗಳನ್ನು ದೃಢಪಡಿಸಿಕೊಳ್ಳಲಾಗಿತ್ತು. ಇದರ ವರದಿಯನ್ನು ಜಿಬಿಎ ಆಡಳಿತ ವಿಭಾಗಕ್ಕೆ ರವಾನಿಸಿದ ವೇಳೆ, ಅಲ್ಲಿನ ಅಧಿಕಾರಿಗಳು ಪರಾಮರ್ಶೆ ನಡೆಸಿ ತಪ್ಪಾಗಿರುವುದು ಮೇಲ್ನೋಟಕ್ಕೆ ಸಾಬೀತಾದ ಕಾರಣ ಮಂಜುಳಾರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇಲಾಖೆ ವಿಚಾರಣೆ ವೇಳೆ ಅನುಮತಿ ಇಲ್ಲದೆ ಕೇಂದ್ರ ಸ್ಥಾನದಿಂದ ಹೊರಹೋಗುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.