Ananth Kumar's 67th Birthday: ಅನಂತಕುಮಾರ್ 67ನೇ ಜನ್ಮದಿನ: ವಿಶಿಷ್ಟ, ಅರ್ಥಪೂರ್ಣ ಆಚರಣೆ

ಅನಂತಕುಮಾರ್ ಕುಮಾರ್ ಅವರ ಮೌಲ್ಯಾಧಾರಿತ ವಿಚಾರಗಳು, ರಾಷ್ಟ್ರ ನಿರ್ಮಾಣದ ಚಿಂತನೆಗಳು ಮತ್ತು ಪ್ರತಿಷ್ಠಾನದ ಚಟುವಟಿಕೆಗಳನ್ನು ಒಳಗೊಂಡ ಮಾಸಪತ್ರಿಕೆ ‘ಅನಂತ ಪಥ-75’ ಸೆಪ್ಟೆಂಬರ್ ತಿಂಗಳ ಪತ್ರಿಕೆ ಬಿಡುಗಡೆ
Celebration of Ananth Kumar's 67th birthday
ಅನಂತಕುಮಾರ್ 67ನೇ ಜನ್ಮದಿನ ಆಚರಣೆ
Published on

ಬೆಂಗಳೂರು: ಅದಮ್ಯ ಚೇತನ ವತಿಯಿಂದ ಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ್ ಅವರ 67ನೇ ಜನ್ಮದಿನವನ್ನು ಮಂಗಳವಾರ ಇಡೀ ದಿನ ವಿಶಿಷ್ಟವಾಗಿ ಆಚರಿಸಲಾಯಿತು.

ಗವಿಪುರದಲ್ಲಿರುವ ಅದಮ್ಯ ಚೇತನ ಕಚೇರಿ ಹಾಗೂ ಥೋಂಡೂಸಾ ಕಲ್ಯಾಣ ಮಂಟಪದಲ್ಲಿ ನಡೆದ ಹತ್ತಾರು ಕಾರ್ಯಕ್ರಮದಲ್ಲಿ ಅನಂತಕುಮಾರ್ ಅವರನ್ನು ಮರುರೂಪಿಸಿದವು.

ರಾಜ್ಯಸಭಾ ಸದಸ್ಯ ಎಂ. ನಾಗರಾಜು, ಅದಮ್ಯಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಸೇರಿ ಹಲವರು ಪಾಲ್ಗೊಂಡಿದ್ದರು.

ಅನಂತಕುಮಾರ್ ಕುಮಾರ್ ಅವರ ಮೌಲ್ಯಾಧಾರಿತ ವಿಚಾರಗಳು, ರಾಷ್ಟ್ರ ನಿರ್ಮಾಣದ ಚಿಂತನೆಗಳು ಮತ್ತು ಪ್ರತಿಷ್ಠಾನದ ಚಟುವಟಿಕೆಗಳನ್ನು ಒಳಗೊಂಡ ಮಾಸಪತ್ರಿಕೆ ‘ಅನಂತ ಪಥ-75’ ಸೆಪ್ಟೆಂಬರ್ ತಿಂಗಳ ಪತ್ರಿಕೆ ಬಿಡುಗಡೆ ಮಾಡಲಾಯಿತು.

ನಾಯಕತ್ವ, ನೀತಿ ನಿರೂಪಣೆ ಮತ್ತು ಭಾರತೀಯ ಜ್ಞಾನ ಪರಂಪರೆಯ ಅಧ್ಯಯನಕ್ಕಾಗಿ ಪಠ್ಯಕ್ರಮಗಳನ್ನು ರೂಪಿಸುವ ಕಾರ್ಯಕ್ರಮಗಳು, ರಾಜಕೀಯ, ಸಾಮಾಜಿಕ ಕಾರ್ಯಗಳು ಸೇರಿ ಜೀವನವನ್ನು ಕುರಿತ ‘ನಮ್ಮಅನಂತಕುಮಾರ್’ ಇಂಗ್ಲಿಷ್ ಕಿರುಚಿತ್ರ ಪ್ರದರ್ಶನವನ್ನು ಪ್ರದರ್ಶಿಸಲಾಯಿತು.

ಹಸಿರುವ ಸೇನಾನಿಗಳಿಗೆ ಸನ್ಮಾನ:

12 ಗಂಟೆಗಳಲ್ಲಿ 25,168 ಸಸಿಗಳನ್ನು ನೆಡುವ ಮೂಲಕ ದಾಖಲೆ ಮಾಡಿರುವ ಹಸಿರು ಸೇವಾನಿಗಳಿಗೆ ಇದೇ ವೇಳೆ ಗೌರವ ಸಮರ್ಪಣೆ ಮಾಡಲಾಯಿತು. ನಿತ್ಯ ಅನ್ನದಾನದ ಸಹಯೋಗಿಗಳು ಮತ್ತು ಸ್ವಯಂಸೇವಕರಿಗೆ ಗೌರವ, ಹಸಿರು ಅಡುಗೆಮನೆಯ ದಾನಿಗಳನ್ನು ಸನ್ಮಾನಿಸಲಾಯಿತು.

ಭಾರತೀಯ ಜ್ಞಾನ ವ್ಯವಸ್ಥೆಯ ಕೊಡುಗೆದಾರರು ಮತ್ತು ಅದಮ್ಯಚೇತನದ ದಾನಿಗಳಿಗೆ ಗೌರವ ಸಲ್ಲಿಸಲಾಯಿತು. ಅದಮ್ಯ ಚೇತನದ ಊಟ ಕೊಡುವ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

5 ಪ್ಲೇಟ್ ಬ್ಯಾಂಕ್ ಘೋಷಣೆ:

ಕಸಮುಕ್ತಗೊಳಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ತಡೆಯುವುದು, ಪೇಪರ್ ಬಳಕೆಗಾಗಿ ಮರ ಕಡಿಯುವುದನ್ನು ತಪ್ಪಿಸುವುದು ಸೇರಿದಂತೆ ಹಲವು ಉಪಯುಕ್ತ ಕ್ರಮಗಳನ್ನು ಒಳಗೊಂಡಿರುವ ಕಾರ್ಯಕ್ರಮವೇ ಪ್ಲೇಟ್ ಬ್ಯಾಂಕ್ ಆಗಿದೆ. ಈಗಾಗಲೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಉಚಿತವಾಗಿ ಪ್ಲೇಟ್ ಮತ್ತು ಲೋಟಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ವಿಸ್ತರಣೆ ಮಾಡಲಾಗುತ್ತಿದೆ. ಹೊಸದಾಗಿ ಐದು ಪ್ಲೇಟ್ ಬ್ಯಾಂಕ್‌ಗಳಿಗೆ ಶುಭಾರಂಭಗೊಳಿಸಿತು.

ಅನಂತಕುಮಾರ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಸದಾ ನಮ್ಮೊಂದಿಗಿದ್ದಾರೆ ಎಂಬ ಅದಮ್ಯ ಭಾವನೆ ನಮ್ಮನ್ನು ಸದಾ ಮುನ್ನಡೆಸುತ್ತಿದೆ. ಎಬಿವಿಪಿ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟ ಅವರೊಂದಿಗೆ, ನಾನು ಸೇರಿ ಹಲವರು ಆರಂಭದ ದಿನಗಳಿಂದಲೂ ಜತೆಯಾಗಿ ಕೆಲಸ ಮಾಡಿದ್ದೇವೆ. ಸಂಘಟನೆಯಲ್ಲಿ ತಮ್ಮನ್ನು ತಾವು ಸಮಿಧೆಯಂತೆ ಸಮರ್ಪಿಸಿಕೊಂಡು, ಅವಿರತವಾಗಿ ದುಡಿದಿದ್ದಾರೆ. - ಎಂ. ನಾಗರಾಜ್, ರಾಜ್ಯಸಭೆ ಸದಸ್ಯ

ಅನಂತಕುಮಾರ್ ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಾ, ಪರಿಸರ ರಕ್ಷಣೆ ಮತ್ತು ಭಾರತೀಯ ಸಂಸ್ಕೃತಿ-ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಅವರು ಆರಂಭಿಸಿದ ಸಂಪೂರ್ಣ ವಂದೇ ಮಾತರಂ ಗಾಯನವನ್ನು ಅದಮ್ಯ ಚೇತನ ನಿರಂತರವಾಗಿ ಮುನ್ನಡೆಸಿಕೊಂಡು ಬಂದಿದೆ. - ತೇಜಸ್ವಿನಿ ಅನಂತಕುಮಾರ್, ಅದಮ್ಯ ಚೇತನ ಮುಖ್ಯಸ್ಥೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net