ಪೂರ್ವ ಪಾಲಿಕೆಯಲ್ಲಿ ವಾರದಲ್ಲಿ 919 ಫ್ಲೆಕ್ಸ್, ಬ್ಯಾನರ್ ತೆರವು
east-corporation
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
25 ಸಾವಿರ ರೂ. ದಂಡದ ಹಣ ವಸೂಲು
ಅನಧಿಕೃತ ಫ್ಲೆಕ್ಸ್ ಹಾಕಿದರೆ ಕಾನೂನು ಕ್ರಮದ ಎಚ್ಚರಿಕೆ
ಬೆಂಗಳೂರು: ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಅನಧಿಕೃತವಾಗಿ ಪ್ರದರ್ಶಿಸಿದ್ದ 919 ಫ್ಲೆಕ್ಸ್, ಬ್ಯಾನರ್‌ಗಳನ್ನು ವಿಶೇಷ ಕಾರ್ಯಾಚರಣೆ ಸಪ್ತಾಹದ ವೇಳೆ ತೆರವುಗೊಳಿಸಲಾಗಿದೆ.
ಕೆ.ಆರ್.ಪುರದ ಸರ್ಕಾರಿ ಕಾಲೇಜು ರಸ್ತೆ, ಟಿ.ಸಿ.ಪಾಳ್ಯ ವೃತ್ತದಿಂದ ಮೇಡಹಳ್ಳಿ ಫ್ಲೈಓವರ್‌ವರೆಗೆ, ಟಿನ್ ಫ್ಯಾಕ್ಟರಿ ಪ್ರದೇಶ, ರಾಮಮೂರ್ತಿನಗರ, ವರ್ತೂರು - ಗುಂಜೂರು ರಸ್ತೆ, ಹೊರಮಾವು - ಬಾಬುಸಾಪಾಳ್ಯ ಮುಖ್ಯರಸ್ತೆ ಸೇರಿ ಇತರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದ ಸೌಂದರ್ಯ ಕಾಪಾಡುವುದು, ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಒದಗಿಸುವುದು ಹಾಗೂ ಮಳೆಗಾಲದ ಸಂದರ್ಭದಲ್ಲಿ ತ್ಯಾಜ್ಯ ಮತ್ತು ಅಡೆತಡೆಗಳಿಂದ ಉಂಟಾಗುವ ಸಮಸ್ಯೆಗಳನ್ನು ತಡೆಯುವ ಉದ್ದೇಶದಿಂದ ವಿವಿಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು ಪಾದಚಾರಿ ಮಾರ್ಗ ಒತ್ತುವರಿ ತೆರವು ಹಾಗೂ ಬ್ಲ್ಯಾಕ್ ಸ್ಪಾಟ್ ಸ್ವಚ್ಛತಾ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಅನಧಿಕೃತವಾಗಿ ಪ್ರದರ್ಶಿಸಿದ್ದ ಫ್ಲೆಕ್ಸ್, ಬ್ಯಾನರ್ ಹಾಕಿದವರನ್ನು ಗುರುತಿಸಿ 40 ಪ್ರಕರಣಗಳನ್ನು ದಾಖಲಿಸಿ 25 ಸಾವಿರ ರೂ. ದಂಡದ ಹಣವನ್ನು ವಸೂಲು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ವಿದ್ಯುತ್ ಕಂಬ, ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳನ್ನು ಹಾಕಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಫುಟ್‌ಪಾತ್ ಒತ್ತುವರಿ ತೆರವು:
ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅಡ್ಡಿಯಾಗಿದ್ದ ಅನಧಿಕೃತ ಅಂಗಡಿ, ತಾತ್ಕಾಲಿಕ ಶೆಡ್, ತಳ್ಳುವ ಗಾಡಿ ಹಾಗೂ ಇತರ ಒತ್ತುವರಿ ಸೇರಿ ುಟ್‌ಪಾತ್‌ನಲ್ಲಿದ್ದ 362ಕ್ಕೂ ಅಧಿಕ ಸಂಖ್ಯೆಯ ವಾಣಿಜ್ಯ ಚಟುವಟಿಕೆ ಸ್ಥಳಗಳನ್ನು ಒಳಗೊಂಡಂತೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಬ್ಲ್ಯಾಕ್ ಸ್ಪಾಟ್ ತೆರವು ಅಭಿಯಾನ:
ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಸ, ತ್ಯಾಜ್ಯ ಹಾಗೂ ನಿರ್ಮಾಣ ಅವಶೇಷ ಸಂಗ್ರಹವಾಗಿ ಬ್ಲ್ಯಾಕ್ ಸ್ಪಾಟ್‌ಗಳಾಗಿ ಮಾರ್ಪಟ್ಟಿದ್ದವು. ಈ ಸ್ಥಳಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯಾಚರಣೆ ಮೂಲಕ ಹೊರಮಾವು - ಅಗರಕೆರೆ ರಸ್ತೆ, ವಿಜ್ಞಾನನಗರ, ವೈಟ್‌ಫೀಲ್ಡ್ ಇನರ್ ಸರ್ಕಲ್ ಪ್ರದೇಶದಲ್ಲಿ 20 ಟನ್ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಚ ಪರಿಸರ ಕಾಪಾಡಲು ಕ್ರಮ ಕೈಗೊಳ್ಳಲಾಯಿತು ಎಂದು ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.