ಬೊಮ್ಮನಹಳ್ಳಿಯಲ್ಲಿ 50 ಆಸ್ತಿ ಹರಾಜು ಇಂದು

propertiesauction
propertiesauction
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ನಗರ ಪಾಲಿಕೆಯಿಂದ ಆಯೋಜನೆ
ಬೆಂಗಳೂರು: ಆಸ್ತಿತೆರಿಗೆ ಪಾವತಿಸದ ಪ್ರಕರಣಗಳಲ್ಲಿ ಸೀಜ್ ಮಾಡಿರುವ 50 ಸ್ವತ್ತುಗಳನ್ನು ದಕ್ಷಿಣ ಪಾಲಿಕೆಯು ಶುಕ್ರವಾರ (ಫೆ.27) ಬಹಿರಂಗ ಹರಾಜು ಹಾಕಲು ನಿರ್ಧರಿಸಿದೆ.
ಹಲವು ವರ್ಷಗಳಿಂದ ಸುಸ್ತಿದಾರರಿಗೆ ಕಾರಣ ಕೇಳಿ ಪತ್ರ, ಆಸ್ತಿ ತೆರಿಗೆ ಬೇಡಿಕೆ ಪತ್ರ ಜಾರಿ ಮಾಡಲಾಗಿದೆ. ಸಾಕಷ್ಟು ಕಾಲಾವಕಾಶ ನೀಡಿದ ನಂತರವೂ ಬಾಕಿ ಉಳಿಸಿಕೊಂಡ ಮಾಲೀಕರಿಗೆ ಮೊಬೈಲ್ ಸಂದೇಶ ಮೂಲಕ ಟ್ಯಾಕ್ಸ್ ಪಾವತಿಸಲು ಸೂಚಿಸಲಾಗಿತ್ತು. ಹಾಗಾಗಿ ಇಂತಹ 50 ಸ್ವತ್ತುಗಳನ್ನು ಹರಾಜು ಹಾಕಲಾಗುತ್ತಿದೆ.
ಬೇಗೂರು ಮುಖ್ಯರಸ್ತೆಯಲ್ಲಿರುವ ಬೊಮ್ಮನಹಳ್ಳಿ ವಲಯದ ಸಂಭಾಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ವಲಯ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸ್ವತ್ತುಗಳಿಂದ ಹರಾಜಿನ ಮೂಲಕ ಬೇಬಾಕಿ ತೆರಿಗೆ ವಸೂಲು ಮಾಡಲಾಗುವುದು. ಹರಾಜು ಪ್ರಕ್ರಿಯೆಯ ಮುನ್ನ ಪಟ್ಟಿಯಲ್ಲಿನ ಸ್ವತ್ತಿಗೆ ಸಂಪೂರ್ಣ ಆಸ್ತಿತೆರಿಗೆ ಪಾವತಿಸಿದಲ್ಲಿ ಅಂತಹ ಆಸ್ತಿಗಳನ್ನು ಹರಾಜು ಪ್ರಕ್ರಿಯೆಯಿಂದ ಕೈಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

13 ಆಸ್ತಿ ಮಾಲೀರಿಂದ ಬಾಕಿ ವಸೂಲು:

ಕಳೆದ ಫೆ.21ರಂದು ಬೊಮ್ಮನಹಳ್ಳಿ ವಲಯದ 30 ಸ್ವತ್ತುಗಳನ್ನು ಹರಾಜು ಹಾಕಲು ದಿನ ನಿಗದಿಯಾಗಿತ್ತು. ಇವುಗಳಲ್ಲಿ 13 ಆಸ್ತಿಗಳ ಮಾಲೀಕರುಗಳು ತಮ್ಮ ಬಾಕಿ ತೆರಿಗೆಯನ್ನು ಸ್ಥಳದಲ್ಲೇ ಪಾವತಿಸಿದ ಕಾರಣ ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿತ್ತು. ಹಾಗಾಗಿ ಹಿಂದಿನ ಪಟ್ಟಿಯಲ್ಲಿದ್ದ 17 ಆಸ್ತಿಗಳ ಜತೆಗೆ ಹೊಸದಾಗಿ 33 ಅನ್ನು ಸೇರಿಸಿ ಒಟ್ಟು 50 ಸ್ವತ್ತುಗಳನ್ನು ಜಿಬಿಎ ಕಾಯ್ದೆ ಹಾಗೂ ನಿಯಮಗಳನ್ವಯ ಹರಾಜಿಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net