ನೀರು ಅದಾಲತ್​ನಲ್ಲಿ ಭಾಗವಹಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ; ಯಾವಾಗ, ಎಲ್ಲಿ? ಇಲ್ಲಿದೆ ಪೂರ್ಣ ವಿವಿರ…

Water
Published on

ಬೆಂಗಳೂರು: ಜಲಮಂಡಳಿಯ ವಿವಿಧ ಉಪವಿಭಾಗಗಳಲ್ಲಿ ಜು.27ರಂದು ನೀರಿನ ಅದಾಲತ್ ನಡೆಯಲಿದೆ. ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಬೆ.9.30 ರಿಂದ 11ರ ವರೆಗೆ ನೀರಿನ ಅದಾಲತ್ ನಡೆಯಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net