ಬೆಂವಿವಿಯನ್ನು ದೇಶದ ಅಗ್ರಗಣ್ಯ ವಿಶ್ವವಿದ್ಯಾಲಯವನ್ನಾಗಿಸುವ ಸಂಕಲ್ಪ: ಬೆಂ.ವಿವಿ ಕುಲಪತಿ ಡಾ. ಎಸ್.ಎಂ. ಜಯಕರ

Bengaluru university
Published on

ಬೆಂಗಳೂರು: ಅತ್ಯುತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯವನ್ನು ಭಾರತದ 20 ಅತ್ಯುತ್ತಮ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಒಂದಾಗಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಬೆಂ.ವಿವಿ ಕುಲಪತಿ ಡಾ. ಎಸ್.ಎಂ. ಜಯಕರ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದದಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸ್ವಾತಂತ್ರ ಭಾರತ ಕೃಷಿ, ತಂತ್ರಜ್ಞಾನ ದಿಂದ ಹಿಡಿದು ಬಾಹ್ಯಕಾಶದವರೆಗೂ ಮುಂಚೂಣಿಯಲ್ಲಿದೆ. ವಿಶ್ವದಲ್ಲೆ ಸಮರ್ಥ,ಸಮೃದ್ದ ರಾಷ್ಟ್ರವಾಗಿ ಭಾರತ ಬೆಳೆದಿದೆ. ಈ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಬೆಂವಿವಿ ಸದಾ ಶ್ರಮಿಸುತ್ತದೆ ಎಂದರು.

ಈ ದೇಶಕ್ಕೆ ಸಾಹಿತಿಗಳು, ಕಾನೂನುಪಂಡಿತರು, ಗಣಿತಜ್ಞರು, ಪರಿಸರವಾದಿಗಳು, ರಾಜಕಾರಣಿಗಳು, ಸಾಮಾಜಿಕ ಚಿಂತಕರು, ಅಧಿಕಾರಿಗಳು, ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಬೆಂಗಳೂರು ವಿಶ್ವವಿದ್ಯಾಲಯ ಹೊಂದಿದೆ. ಕೃತಕ ಬುದ್ಧಿಮತ್ತೆ (ಎಐ)ವಿಶ್ವದ ಹೊಸ ಆವಿಷ್ಕಾರವಾಗಿದ್ದು, ಬೆಂವಿವಿ ಕೂಡ ಇದಕ್ಕೆ ಆದ್ಯತೆ ನೀಡಿದೆ. ವಿಶ್ವದ ಬೇಡಿಕೆ, ಬದಲಾವಣೆಗೆ ತಕ್ಕಂತೆ ಪಠ್ಯಕ್ರಮದದಲ್ಲಿ ಎಐ ಅಳವಡಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ನೂತನ ಕೋರ್ಸ್ ಸಹ ಆರಂಭಿಸಲಾಗಿದೆ ಎಂದು ಹೇಳಿದರು.

ನ್ಯಾಕ್ ಮತ್ತು ಎ++ ಮಾನ್ಯತೆ ಮತ್ತು ಪಿಎಂ ಉಷಾ ಯೋಜನೆಯಡಿ 100 ಕೋಟಿ ಅನುದಾನ ಪಡೆದಿದ್ದ ಬೆಂವಿವಿ ಎನ್‌ಐಆರ್‌ಎ್ ಶ್ರೇಯಾಂಕದಲ್ಲಿ ಕೂಡ ಅಗ್ರಸ್ಥಾನ ಪಡೆದಿದೆ. ಭವಿಷ್ಯದಲ್ಲಿ ಬೆಂ. ವಿವಿ ಸಂಶೋಧನೆ ಮತ್ತು ಅಧ್ಯಯನಕ್ಕೆ ಮತ್ತಷ್ಟು ಆದ್ಯತೆ ನೀಡಿ ಸರ್ವತೋಮುಖ ಅಭಿವೃದ್ಧಿಯನ್ನು ಕಾಣಲಿದೆ. ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಕರ್ಯ, ವೃತ್ತಿ ಮಾರ್ಗದರ್ಶನ ಸೇರಿ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕುಲಸಚಿವ ಶೇಕ್ ಲತ್ೀ,ಕುಲಸಚಿವ (ಮೌಲ್ಯಮಾಪನ)ಸಿ. ಶ್ರೀನಿವಾಸ್, ವಿತ್ತಾಧಿಕಾರಿ ಸುನೀತಾ, ಸಿಂಡಿಕೇಟ್ ಸದಸ್ಯರಾದ ಮಾಲಿನಿ ಮತ್ತು ಸೋಮಶೇಖರ್, ವಿವಿ ಅಧಿಕಾರಿಗಳು, ವಿಭಾಗ ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net