ಕರೊನಾ‌ ಔಷಧಿ ಅಕ್ರಮ ಮಾರಾಟ: ಸಿಸಿಬಿ ಪೊಲೀಸರಿಂದ ಮೂವರ ಬಂಧನ

Accused Arrest
Published on

ಬೆಂಗಳೂರು: ಹೋದೆಯ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಎಂಬಂತೆ ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆ ದಿನದಿಂದ ದಿನಕ್ಕೆ ಉಗ್ರರೂಪ ತಾಳುತ್ತಿದೆ. ಹೀಗಿರುವಾಗ ಜನರ ಭರವಸೆಯಾಗಿರುವ ಕರೊನಾ ಔಷಧ ಕಾಳಸಂತೆಯಲ್ಲಿ ಕಂತೆ-ಕಂತೆ ಹಣಕ್ಕೆ ಮಾರಾಟವಾಗುತ್ತಿರುವುದು ವಿಪರ್ಯಾಸ.

ಕರೊನಾ ರೋಗಿಗಳಿಗೆ ಕೊಡಲು ರೆಮಿಡಿಸಿವರ್ ಇಂಜೆಕ್ಷನ್ ಆಸ್ಪತ್ರೆಗಳಲ್ಲಿ ಸ್ಟಾಕ್ ಇಲ್ಲ. ಆದರೆ, ಕಾಳ ಸಂತೆಯಲ್ಲಿ ಮಾತ್ರ ಭರ್ಜರಿಯಾಗಿ ಮಾರಾಟವಾಗುತ್ತಿದ್ದು, ಕರೊನಾ ಔಷಧಿಗೆ ಮಾರಾಟ ಮಾಡುತ್ತಿದ್ದವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರಿನಾದ್ಯಂತ ಸಿಸಿಬಿ ಕಾರ್ಯಾಚರಣೆ ನಡೆಸಿ ಕರೊನಾ‌ ಔಷಧಿ ರೆಮಿಡಿಸಿವರ್​ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಲಸಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ರಾಜೇಶ್, ಸಾಕೀಬ್ ಹಾಗೂ ಸೊಹೈಲ್ ಎಂದು ಗುರುತಿಸಲಾಗಿದೆ.

ರಾಜೇಶ್ ಮತ್ತು ಸಾಕೀಬ್ ಗುರುಶ್ರೀ ಮೆಡಿಕಲ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಇಬ್ಬರ ವಿರುದ್ಧ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಬ್ಬ ಆರೋಪಿ ಸೊಹೈಲ್ ವಿರುದ್ಧ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಒಂದು ರೆಮಿಡಿಸಿವರ್ ಇಂಜೆಕ್ಷನ್​ಗೆ ಹೆಚ್ಚುವರಿಯಾಗಿ 10,500 ರೂ.ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಒಟ್ಟು 11 ರೆಮಿಡಿಸಿವರ್​ ಇಂಜೆಕ್ಷನ್ ಬಾಟಲ್​ಗಳನ್ನು ಜಪ್ತಿ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net