ಬೆಂಗಳೂರು-ಮಂಗಳೂರು ರೈಲು ಸೇವೆ ರದ್ದತಿ ವಿಸ್ತರಣೆ

Train
Published on

ಬೆಂಗಳೂರು: ಮಂಗಳೂರು-ಹಾಸನ ರೈಲ್ವೇ ಮಾರ್ಗದ ಯಡಕುಮರಿ ಮತ್ತು ಕಡಗರವಳ್ಳಿ ಮಧ್ಯೆ ಹಳಿ ಮೇಲೆ ಭೂಕುಸಿತವಾಗಿರುವುದರಿಂದ ರದ್ದುಪಡಿಸಲಾಗಿದ್ದ 12 ರೈಲುಗಳ ರದ್ದತಿಯನ್ನು ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಕೆಎಸ್​ಆರ್​ ಬೆಂಗಳೂರು-ಕಣ್ಣೂರು ರೈಲು ಆ. 6, 7 ಮತ್ತು ಕಣ್ಣೂರು-ಬೆಂಗಳೂರು ರೈಲನ್ನು ಆ. 7, 8ರಂದು ರದ್ದುಪಡಿಸಲಾಗಿದೆ. ಕೆಎಸ್​ಆರ್-ಕಾರವಾರ ರೈಲು ಆ. 6, 7 ಮತ್ತು ಕಾರವಾರ-ಕೆಎಸ್​ಆರ್​ ರೈಲು ಆ.7, 8 ರಂದು ರದ್ದುಗೊಂಡಿದೆ. ಎಸ್​ಎಂವಿಟಿ ಬೆಂಗಳೂರು-ಮುರುಡೇಶ್ವರ ರೈಲು ಆ. 6, 7 ಮತ್ತು ಮುರುಡೇಶ್ವರ-ಎಸ್​ಎಂವಿಟಿ ಬೆಂಗಳೂರು ರೈಲನ್ನು ಆ.7, 8ರಂದು ರದ್ದುಗೊಳಿಸಲಾಗಿದೆ.

ವಿಜಯಪುರ-ಮಂಗಳೂರು ಸೆಂಟ್ರಲ್​ ರೈಲು ಆ. 6, 7 ಮತ್ತು ಮಂಗಳೂರು ಸೆಂಟ್ರಲ್​-ವಿಜಯಪುರ ರೈಲನ್ನು ಆ.7, 8ರಂದು ರದ್ದುಗೆಳಿಸಲಾಗಿದೆ. ಯಶವಂತಪುರ-ಕಾರವಾರ ರೈಲು ಆ.7 ಹಾಗೂ ಕಾರವಾರ-ಯಶವಂತಪುರ ಆ.8ರಂದು ರದ್ದುಗೊಂಡಿದೆ. ಯಶವಂತಪುರ-ಮಂಗಳೂರು ಜಂಕ್ಷನ್​ ಆ.6 ಹಾಗೂ ಮಂಗಳೂರು ಜಂಕ್ಷನ್​-ಯಶವಂತಪುರ ರೈಲು ಆ.7 ರಂದು ರದ್ದುಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net