ಬೆಂಗಳೂರು: ಜಲಮಂಡಳಿಯು ಚಂದ್ರಾಬಡಾವಣೆಯ ಜಲಗಾರಕ್ಕೆ ನೀರು ಪೂರೈಕೆಯ ಮಾರ್ಗಗಳಲ್ಲಿರುವ ಕವಾಟಗಳ ದುರಸ್ತಿ ಕಾಮಗಾರಿ ಸಲುವಾಗಿ ಕಾವೇರಿ 4ನೇ ಹಂತದ 1ನೇ ಫೇಸ್ನ ಮೂರು ಪಂಪ್ಗಳನ್ನು ಬುಧವಾರ(ಸೆ.13) ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಈ ಕೆಳಗಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಮಾಹಿತಿ ನೀಡಿದೆ.