ಕರಗ ಉತ್ಸವ ದೇವಾಲಯದಲ್ಲಿ ವಿಶೇಷ ಪೂಜೆ

Karaga pooje
Published on

ಬೆಂಗಳೂರು: ನಗರದ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಆರಂಭವಾಗಿರುವ ಕರಗ ಉತ್ಸವದ ಪ್ರಯುಕ್ತ ಏಕಾದಶಿಯ ದಿನವಾದ ಶುಕ್ರವಾರ ವಿಶೇಷ ಪೂಜೆ ನಡೆಯಿತು. ಅರ್ಚಕ ಜ್ಞಾನೇಂದ್ರ ಪರಿವಾರ ಸಮೇತರಾಗಿ ಗವಿಪುರದ ಶ್ರೀ ಜಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಗಂಗೆ ಪೂಜೆ ನೆರವೇರಿಸಿದರು.

ಏ. 20ರಂದು (ಶನಿವಾರ) ಬೆಳಗ್ಗೆ 10.30ಕ್ಕೆ ಅರ್ಚಕ ಜ್ಞಾನೇಂದ್ರ ಅವರು ಶ್ರೀ ಅಣ್ಣಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಎಂದಿನಂತೆ ರಾತ್ರಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ಬೆಳಗಿನ ಜಾವದ ವೇಳೆಗೆ ವಹ್ನಿ ಕುಲದ ಹೆಣ್ಣುಮಕ್ಕಳು ಆರತಿ ದೀಪದೊಂದಿಗೆ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.

ಆರತಿ ದೀಪದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೀಪಗಳೊಂದಿಗೆ ಸಕಾಲದಲ್ಲಿ ದೇವಾಲಯ ತಲುಪಬೇಕು. ಶಿಸ್ತಿನಿಂದ ಸಾಲಾಗಿ ಬಂದು ದೇವರ ದರ್ಶನ ಮಾಡಬೇಕು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸತೀಶ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net