ಗಾಳಿ ಮಳೆಯಿಲ್ಲದಿದ್ದರೂ ಬೆಳ್ಳಂಬೆಳಗ್ಗೆ ಸಿಲಿಕಾನ್​ ಸಿಟಿಯಲ್ಲಿ ಧರೆಗುರುಳಿದ ಬೃಹತ್​ ಮರ

Tree Uproot
Published on

ಬೆಂಗಳೂರು: ಬೆಳ್ಳಂಬೆಳಗ್ಗೆ ಇದ್ದಕ್ಕಿದ್ದಂತೆ ಭಾರಿ ಗಾತ್ರದ ಮರವೊಂದು ಧರೆಗುರುಳುವ ಮೂಲಕ ನಗರದ ಗಿರಿನಗರದ ಜನತೆಗೆ ಶಾಕ್​ ಕೊಟ್ಟಿದೆ.

ಗಾಳಿ ಮಳೆಯಿಲ್ಲದಿದ್ದರೂ ಮರ ಬಿದ್ದಿದೆ. ಮೋರಿಯಲ್ಲಿ ಬೇರು ಬಿಟ್ಟಿದ್ದ ಮರ ಬುಡ ಹಾಗೂ ಕಲ್ಲು ಚಪ್ಪಡಿಗಳ ಸಮೇತ ರಸ್ತೆಗೆ ಉರುಳಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಜನ ಸಂಚಾರ ವಿರಳವಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಧರೆಗುರುಳಿದ ಮರ ಎರಡು ಕಾರುಗಳ ಮೇಲೆ ಬಿದಿದ್ದು, ಕಾರುಗಳು ಸಂಪೂರ್ಣ ಜಖಂಗೊಂಡಿವೆ. ರಸ್ತೆಗೆ ಅಡ್ಡಾಲಾಗಿ ಮರಬಿದ್ದಿದ್ದು, ಅದರ ತೆರವು ಕಾರ್ಯ ನಡೆಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net