

ಬೆಂಗಳೂರು: ಪಾದರಾಯನಪುರ ಪುಂಡರಿಂದ ಇದೀಗ ಕರೊನಾ ಭೀತಿಯಿಲ್ಲದೇ ಶಾಂತವಾಗಿರುವ ರಾಮನಗರಕ್ಕೂ ಕೋವಿಡ್-19 ಭಯ ಕಾಡುತ್ತಿದೆ.
ಭಾನುವಾರ ರಾತ್ರಿ ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ 54 ಮಂದಿಯನ್ನು ಬಂಧಿಸಲಾಗಿದ್ದು, ಅವರನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲು ಪ್ಲಾನ್ ಮಾಡಲಾಗಿದೆ.
ರಾಮನಗರ ಜಿಲ್ಲಾ ಕಾರಾಗೃಹದಲ್ಲಿನ 177 ಕೈದಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಪ್ರತ್ಯೇಕವಾಗಿ ರವಾನೆ ಮಾಡಿದ ಬಳಿಕ ಕರೊನಾ ಹಾಟ್ಸ್ಟಾಪ್ ಗಲಭೆಕೋರರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡುತ್ತಿರುವುದಕ್ಕೆ ಅಲ್ಲಿನ ಕೈದಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ನಾವು ತೆರಳುವುದಿಲ್ಲ. ಬೆಂಗಳೂರಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ರಾಮನಗರ ಜೈಲಿನಿಂದ ನಮ್ಮನ್ನು ಶಿಫ್ಟ್ ಮಾಡಬೇಡಿ ಎಂದು ಒತ್ತಾಯಿಸಿದ್ದಾರೆ.
ರಾಮನಗರ ಜಿಲ್ಲೆ ಕರೊನಾ ಪ್ರಕರಣದಲ್ಲಿ ಗ್ರೀನ್ ಜೋನ್ನಲ್ಲಿದೆ. ಇದುವರೆಗೂ ಯಾವುದೇ ಕರೊನ ಪ್ರಕರಣ ರಾಮನಗರದಲ್ಲಿ ಪತ್ತೆಯಾಗಿಲ್ಲ. ಆದರೆ, ಪಾದರಾಯನಪುರದ ಕರೊನ ಶಂಕಿತ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡುತ್ತಿರುವುದರಿಂದ ರಾಮನಗರಕ್ಕೂ ಕರೊನಾ ಭಯ ಕಾಡಲು ಶುರುವಾಗಿದೆ. (ದಿಗ್ವಿಜಯ ನ್ಯೂಸ್)