

ಮೈಸೂರು: ಬೆಂಗಳೂರಿನಿಂದ ಬರುತ್ತಿರುವ ಪ್ರವಾಸಿಗರಿಂದಲೇ ಬಹುತೇಕ ಕರೊನಾ ಪಾಸಿಟಿವ್ ಬರುತ್ತಿರುವುದರಿಂದ ಮೈಸೂರಿಗರಿಗೆ ಹೊಸ ಆತಂಕ ಶುರುವಾಗಿದೆ.
ನಿತ್ಯ ಮೈಸೂರು- ಬೆಂಗಳೂರು ನಡುವೆ 5ಸಾವಿರಕ್ಕೂ ಅಧಿಕ ವಾಹನಗಳ ಸಂಚಾರ ಮಾಡುತ್ತವೆ. ಕೂಲಿ, ಕಚೇರಿ ಕೆಲಸ ಹಾಗೂ ಕೋರ್ಟ್ ವ್ಯವಹಾರಗಳಿಗೆ ಬೆಂಗಳೂರಿಗೆ ತೆರಳುವ ಜನ ವೀಕೆಂಡ್ನಲ್ಲಿ ಬೆಂಗಳೂರು ಬಿಟ್ಟು ಮೈಸೂರಿಗೆ ಬರುತ್ತಾರೆ.
ಜನರ ಅಸುರಕ್ಷಿತ ಓಡಾಟದಿಂದಲೇ ಕರೊನಾ ಹೆಚ್ಚಳವಾಗಿದೆ. ಬೆಂಗಳೂರಿಂದ ಬಂದು ಕರೊನಾ ಅಂಟಿಸಿ ಹೋಗುತ್ತಿದ್ದಾರೆ ಎನ್ನಲಾಗಿದೆ. ಮೈಸೂರಿನಲ್ಲಿ ಕರೊನಾ ಎರಡನೇ ಅಲೆ ಆರಂಭವಾಗಲು ಕೇರಳ ನರ್ಸಿಂಗ್ ವಿದ್ಯಾರ್ಥಿಗಳು ಕಾರಣರಾಗಿದ್ದರು. ಇದೀಗ ಈಗ ಬೆಂಗಳೂರು ಸಂಪರ್ಕದಿಂದ ಕೇಸ್‌ಗಳು ಹೆಚ್ಚಳವಾಗಿದೆ.