

ಬೆಂಗಳೂರು: ಬಸ್ ಚಕ್ರದಡಿ ಸಿಲುಕಿದ ಬೈಕ್ ಸವಾರ ಈ ಭೀಕರ ವಿಡಿಯೋ ನೋಡುತ್ತಿದ್ದಂತೆ ಎಂತಹವರೂ ಬೆಚ್ಚಿ ಬೀಳುವುದಂತೂ ಸತ್ಯ. ಈ ಭೀಕರ ವಿಡಿಯೋವನ್ನು ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಜಂಟಿ ಆಯುಕ್ತ ಡಾ.ಬಿಆರ್ ರವಿಕಾಂತೇಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೈಕ್ ಸವಾರ ನೇರವಾಗಿ ಬಸ್ಸಿಗೆ ಡಿಕ್ಕಿ ಹೊಡೆದು ಬಸ್ಸಿನ ಚಕ್ರದ ಕೆಳಗೆ ತಲೆ ಸಿಲುಕಿಕೊಳ್ಳುತ್ತದೆ. ಬಸ್ಸಿನ ಚಾಲಕ ತಕ್ಷಣವೇ ಬಸ್ಸನ್ನು ನಿಲ್ಲಿಸುತ್ತಾನೆ.ಆಗ ಚಕ್ರದಡಿಯಿಂದ ಬದುಕಿಬರುತ್ತಾನೆ.
ಈ ಭಯಾನಕ ವಿಡಿಯೋ ಹಂಚಿಕೊಂಡಿರುವ ಜಂಟಿ ಆಯುಕ್ತ ರವಿಕಾಂತೇಗೌಡ ಅವರು, ಬೈಕ್ ಸವಾರರಿಗೆ ಸಲಹೆಯನ್ನೂ ನೀಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಐಎಸ್ಐ ಮಾರ್ಕ್ವುಳ್ಳ ಗುಣಮಟ್ಟದ ಹೆಲ್ಮೆಟ್ ಅನ್ನೇ ಧರಿಸಿ ಎಂದು ಸೂಚಿಸಿದ್ದಾರೆ.
ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿದ್ದರಿಂದಲೇ ಈ ಯುವಕ ಬದುಕುಳಿದಿದ್ದಾನೆ. ಚಕ್ರದಡಿ ಸಿಲುಕಿದ್ದರೂ ಬದುಕುಳಿಯಲು ಈ ಹೆಲ್ಮೆಟ್ ಕಾರಣ ಎಂದು ಹೇಳಿದ್ದಾರೆ. (ಏಜೆನ್ಸೀಸ್)