ಪಾರ್ಕಿಂಗ್ ವಿಚಾರ: ಪೊಲೀಸ್ ಮತ್ತು ಕ್ಯಾಬ್ ಚಾಲಕನ ನಡುವೆ ಜಟಾಪಟಿ...ವಿಡಿಯೋ ವೈರಲ್​​! Bengaluru

untitled-design-16-68fb184092821
Published on

ಬೆಂಗಳೂರು: ಬೆಂಗಳೂರಿನ ಆರ್‌ಟಿ ನಗರ ಫ್ಲೈಓವರ್ ಬಳಿ ( Bengaluru ) ಟ್ರಾಫಿಕ್ ಪೊಲೀಸ್ ಅಧಿಕಾರಿ ಮತ್ತು ಕ್ಯಾಬ್ ಚಾಲಕನ ನಡುವೆ ನಡೆದ ಮಾತಿನ ಚಕಮಕಿ ವಿಡಿಯೋ ಸಧ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ಕರ್ನಾಟಕ ಪೋರ್ಟ್‌ಫೋಲಿಯೋ ಪುಟವು ಹಂಚಿಕೊಂಡಿರುವ ಈ ವೀಡಿಯೊವನ್ನು "ಆಘಾತಕಾರಿ ಘಟನೆ" ಎಂದು ಶೀರ್ಷಿಕೆ ನೀಡಿದ್ದು, ಇಲ್ಲಿ ಅಧಿಕಾರಿಯೊಬ್ಬರು ಸಣ್ಣ ಪಾರ್ಕಿಂಗ್ ಸಮಸ್ಯೆಗೆ ಕ್ಯಾಬ್ ಚಾಲಕ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಿದೆ.

ಕ್ಯಾಬ್ ಚಾಲಕನು ಐದು ನಿಮಿಷಗಳ ಕಾಲ ತನ್ನ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದನು. ಇದನ್ನು ಗಮನಿಸಿದ ಸಂಚಾರಿ ಪೊಲೀಸ್ ಇದ್ದಕ್ಕಿದ್ದಂತೆ ಚಾಲಕನ್ನು ಕೂಗಲು ಮತ್ತು ನಿಂದಿಸಲು ಪ್ರಾರಂಭಿಸಿದ್ದಾನೆ. ಇದಾದ ಕೆಲವು ಕ್ಷಣಗಳ ನಂತರ ಅಧಿಕಾರಿ ಸಾರ್ವಜನಿಕವಾಗಿ ಚಾಲಕನಿಗೆ ಕಪಾಳಮೋಕ್ಷ ಮಾಡಿ ಹಲ್ಲೆ ಮಾಡಿದ್ದಾನೆ ಎಂದು ಪೋಸ್ಟ್​ ತಿಳಿಸಿದೆ.

ವಿಡಿಯೋ ಸಾಕ್ಷ್ಯವು ವಿಷಯವನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ. ಅಧಿಕಾರಿಯಾಗಲಿ ಅಥವಾ ಕ್ಯಾಬ್ ಚಾಲಕರಾಗಲಿ ಅಪರಾಧಿಗಳು ಸೂಕ್ತ ಶಿಕ್ಷೆಯನ್ನು ಎದುರಿಸುವಂತೆ ತ್ವರಿತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಹಾಗೆಯೇ ಯಾರೂ, ವಿಶೇಷವಾಗಿ ಕಾನೂನನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಹೊಂದಿರುವವರು, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ನಾಗರಿಕರನ್ನು ಬೆದರಿಸಲು ಬಿಡಬಾರದು. ಕಾನೂನು ಜಾರಿ ಸಂಸ್ಥೆಗಳಲ್ಲಿ ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳಲು ಹೊಣೆಗಾರಿಕೆ ಮತ್ತು ನ್ಯಾಯ ಅತ್ಯಗತ್ಯ ಎಂದು ಸಾಮಾಜಿಕ ವೇದಿಕೆಗಳು ಅಭಿಪ್ರಾಯಪಟ್ಟಿದ್ದಾವೆ.

ಪ್ರತ್ಯಕ್ಷದರ್ಶಿಗಳು ಪೊಲೀಸರ ನಡವಳಿಕೆಯನ್ನು ತುಂಬಾ ಕೆಟ್ಟ ಕೆಲಸ ಎಂದು ಬಣ್ಣಿಸಿದ್ದು, ಇದು ಅಧಿಕಾರದ ದುರುಪಯೋಗ ಎಂದು ಕರೆದಿದ್ದಾರೆ.

ವಿಡಿಯೋಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸರ ಅಧಿಕೃತ X ಖಾತೆಯು ಆರ್‌ಟಿ ನಗರ ಸಂಚಾರ ಪೊಲೀಸರು ಮತ್ತು ಸಂಚಾರ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿ, ಈ ವಿಷಯ ಪರಿಶೀಲನೆಯಲ್ಲಿದೆ ಎಂದು ಸೂಚಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಆದಾಗ್ಯೂ, ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಭಿನ್ನಾಭಿಪ್ರಾಯವಿತ್ತು. ಕೆಲವರು ಅಧಿಕಾರಿಯ ಆಕ್ರಮಣಕಾರಿ ನಡವಳಿಕೆಯನ್ನು ಖಂಡಿಸಿದರೆ, ಇನ್ನು ಕೆಲವರು ತಪ್ಪಾದ ಪಾರ್ಕಿಂಗ್ ಕೂಡ ದೈನಂದಿನ ಸಂಚಾರ ಅವ್ಯವಸ್ಥೆಗೆ ಕಾರಣವಾಗುತ್ತದೆ ಎಂದು ಬರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net