

ಮುಂಬೈ: ಏರ್ ಇಂಡಿಯಾ ವಿಮಾನದಲ್ಲಿ ( Air India flight ) ಮಹಿಳಾ ಸಹ-ಪ್ರಯಾಣಿಕಯೊಬ್ಬರು ಮರಾಠಿ ಮಾತನಾಡದ ಕಾರಣ ಬೆದರಿಕೆ ಹಾಕುತ್ತಿರುವ ದೃಶ್ಯಗಳನ್ನು ಯ್ಯೂಟೂಬರ್ ಮಹಿ ಖಾನ್ ಹಂಚಿಕೊಂಡ ನಂತರ ಇದು ಎಲ್ಲೆಡೆ ಭಾರೀ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕೊಲ್ಕಾತ್ತಾದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI676 ರಲ್ಲಿ ಈ ಘಟನೆ ನಡೆದಿದೆ ಎಂದು ಖಾನ್ ತಿಳಿಸಿದ್ದಾರೆ. ಈ ವೇಳೆ ಮುಂಬೈಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಮರಾಠಿ ಮಾತನಾಡಬೇಕೆಂದು ಒತ್ತಾಯಿಸಿದರು. ಈ ವೇಳೆ ಖಾನ್ ಪ್ರತಿಕ್ರಿಯಿಸಿದ್ದು, "ನಾನು ಮರಾಠಿಯಲ್ಲಿ ಮಾತನಾಡಬೇಕು ಎಂದು ನೀವು ಹೇಳುತ್ತಿದ್ದೀರಾ? ಎಂದು ಮಹಿಳೆಗೆ ಪ್ರಶ್ನಿಸಿದ್ದಾರೆ.
ಅದಕ್ಕೆ ಆ ಮಹಿಳೆಯು ಉತ್ತರಿಸಲು ನಿರಾಕರಿಸಿದ್ದು, ನೀವು ಮುಂಬೈಗೆ ಹೋಗುತ್ತಿದ್ದೀರಿ, ನಿಮಗೆ ಮರಾಠಿ ತಿಳಿದಿರಬೇಕು ಎಂದಿದ್ದಾಳೆ. ಅದಕ್ಕೆ ಖಾನ್ ನನಗೆ ಮರಾಠಿ ಬರುವುದಿಲ್ಲ ಎಂದು ಉತ್ತರಿಸಿದ್ದಾರೆ. ಈ ವಾದ ವಿವಾದವು ಉಲ್ಬಣಕ್ಕೆ ಹೋಗಿದ್ದು, ಖಾನ್ ಕ್ಯಾಬಿನ್ ಸಿಬ್ಬಂದಿಗೆ ಸಹಾಯಕ್ಕಾಗಿ ಕರೆ ಮಾಡಿದನೆಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯು ನೀವು ಮುಂದೆ ಮುಂಬೈನಲ್ಲಿ ಇಳಿಯಿರಿ. ದುರ್ವರ್ತನೆ ಎಂದರೆ ಏನು ಎಂದು ನಾನು ನಿಮಗೆ ತೋರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ಅವರು ವಿವರಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಖಾನ್, "ಮರಾಠಿ ಮಾತನಾಡಿ ಅಥವಾ ಮುಂಬೈ ಬಿಟ್ಟು ಹೋಗಿ. ಈ ಮಹಿಳೆ ಇಂದು ನನ್ನ ಏರ್ ಇಂಡಿಯಾ ವಿಮಾನ AI676 ನಲ್ಲಿ 'ನನಗೆ ಮರಾಠಿ ಅರ್ಥವಾಗುವುದಿಲ್ಲ' ಎಂದು ಹೇಳಿದ್ದಕ್ಕಾಗಿ ಮಹಿಳೆಯು ಬೆದರಿಕೆ ಹಾಕಿದ್ದಾಳೆ ಎಂದು ಬರೆದಿದ್ದಾರೆ.
ಈ ವಿಡಿಯೋ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದಂತೆಯೇ, ಏರ್ ಇಂಡಿಯಾ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು, ವಿಮಾನಯಾನ ಸಂಸ್ಥೆಯನ್ನು ಟ್ಯಾಗ್ ಮಾಡಿ ಈ ಜನರನ್ನು ನಿಷೇಧಿಸಬೇಕು. ಬೇರೆ ಭಾಷೆಯಲ್ಲಿ ಮಾತನಾಡಿದ ಕಾರಣ ಯಾವುದೇ ಪ್ರಯಾಣಿಕರು ಅಸುರಕ್ಷಿತ ಅಥವಾ ಅವಮಾನಿತರಾಗಬಾರದು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. (ಎಜೆನ್ಸೀಸ್)