

ಬೆಂಗಳೂರು: ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಜಪಾನಿ, ಚೀನಿ, ಕೊರಿಯಾ, ಇಟಾಲಿಯನ್, ಪೋರ್ಚಗೀಸ್ ಮುಂತಾದ ಜಾಗತಿಕ ಭಾಷೆಗಳ ಕೋರ್ಸ್‌ಗಳ ಪ್ರವೇಶಕ್ಕಾಗಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯವು ಅರ್ಜಿ ಆಹ್ವಾನಿಸಿದೆ.
ಸೆ.10 ಅರ್ಜಿ ಸಲ್ಲಿಸಲು ಕೊನೆಯ ದಿನ. 200 ರೂ. ದಂಡ ಶುಲ್ಕದೊಂದಿಗೆ ಸೆ. 15ರವರೆಗೆ ಅವಕಾಶವಿದ್ದು, ಸೆ. 20ರಂದು ತರಗತಿಗಳು ಪ್ರಾರಂಭವಾಗಲಿವೆ. ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್‌ಗೆ 10,250 ರೂ. ಪದವಿ ಡಿಪ್ಲೋಮಾ ಕೋರ್ಸ್‌ಗೆ 12,250 ರೂ ಹಾಗೂ ಸ್ನಾತಕೋತ್ತರ ಪದವಿ ಡಿಪ್ಲೊಮಾ ಕೋರ್ಸ್‌ಗೆ 13,250 ರೂ. ಶುಲ್ಕ ನಿಗದಿಪಡಿಸಲಾಗಿದೆ.
ವಿವರಗಳಿಗೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಜಾಗತಿಕ ಭಾಷೆಗಳ ವಿಭಾಗ, ಪ್ರಸನ್ನಕುಮಾರ್ ಬ್ಲಾಕ್, ಸೆಂಟ್ರಲ್ ಕಾಲೇಜು ಆವರಣ, ಪ್ಯಾಲೇಸ್ ರಸ್ತೆ, ಬೆಂಗಳೂರು-560009. ದೂ: 080-29572019 ಮೊ: 8095588190 ಸಂಪರ್ಕಿಸಬಹುದು.