

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕೃಷಿ ಲಾಭದಾಯಕವಾಗಿದ್ದರೂ ಭಾರತದಲ್ಲಿ ಯುವಜನತೆ ಕೃಷಿಯಿಂದ ವಿಮುಖರಾಗುತ್ತಿರುವುದು ಆತಂಕಕಾರಿ. ದೇಶದ ದೊಡ್ಡ ಸಂಪತ್ತಿನ ಮೂಲಕವೇ ಕೃಷಿಯಾಗಿದ್ದು, ಸಮರ್ಪಕ ಮಾಹಿತಿ ಪಡೆದು ಕೃಷಿ ಮಾಡಿದರೆ ಅತ್ಯಧಿಕ ಲಾಭ ಪಡೆಯಬಹುದು ಎಂದು ಮೊಳಹಳ್ಳಿ ಎಂ.ದಿನೇಶ್ ಹೆಗ್ಡೆ ಹೇಳಿದರು.
ಉಡುಪಿ ಜಿಲ್ಲಾ ಕೃಷಿಕ ಸಂಘ ಕುಂದಾಪುರ ವಲಯ ಸಮಿತಿ ಮತ್ತು ಮಲ್ಲಿಗೆ ಬೆಳೆಗಾರರ ಒಕ್ಕೂಟ ಕುಂದಾಪುರ, ಮೊಳಹಳ್ಳಿ ಹೊರನಾಡಿ ನಂದಗೋಕುಲ ಡೇರಿ ಫಾರ್ಮ್ ಸಹಯೋಗದಲ್ಲಿ ಮೊಳಹಳ್ಳಿ ಅಣ್ಣಪ್ಪ ಕುಲಾಲ್ ಮನೆ ವಠಾರದಲ್ಲಿ ಭಾನುವಾರ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೊರನಾಡಿ ಯು.ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಶಶಿಧರ ಹೆಗ್ಡೆ ಕೊಯ್ಕಡಿ, ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ, ಯಕ್ಷ ಕಲಾವಿದ ಅಣ್ಣಪ್ಪ ಕುಲಾಲ್, ವಿನೋದಾ ಡಿ.ಶೆಟ್ಟಿ, ರೊನಾಲ್ಡ್ ಡಿಸೋಜ, ಶ್ಯಾಮ ಕೆ, ಪ್ರಭಾಕರ ಶೆಟ್ಟಿ, ಪ್ರೇಮಾ ಶೆಟ್ಟಿ, ಸವಿತಾ ಹೊಂಬಾಡಿ, ಪ್ರೇಮಾನಂದ ಕುಲಾಲ್, ರಮೇಶ್ ಪೂಜಾರಿ ಉಪಸ್ಥಿತರಿದ್ದರು. ರವೀಂದ್ರ ಗುಜ್ಜರಬೆಟ್ಟು ಪ್ರಸ್ತಾವನೆಗೈದರು. ಗಣೇಶ್ ಶೆಟ್ಟಿ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಕಡಿಮೆ ಖರ್ಚು, ಕಡಿಮೆ ಪ್ರಮಾಣದ ಶ್ರಮ, ಗೊಬ್ಬರ, ನೀರು ಬಳಸಿ ಲಾಭದಾಯಕವಾಗಿ ಮಲ್ಲಿಗೆ, ತೆಂಗು, ಅಡಕೆ, ಬಾಳೆ ಕೃಷಿ ನಾಟಿ, ರೋಗ ಬಾಧೆ ನಿಯಂತ್ರಿಸುವ ಕುರಿತು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ಮಾಹಿತಿ ನೀಡಿದರು.