ಪಂಚವರ್ಣ ಸಂಸ್ಥೆಯಿಂದ ಮಣೂರಿನಲ್ಲಿ ಸ್ವಚ್ಛತೆ

kota-3
Published on

ಕೋಟ: ಮಣೂರು ರಾಷ್ಟ್ರೀಯ ಹೆದ್ದಾರಿಯಿಂದ ಪಡುಕರೆ ಸಂಪರ್ಕಿಸುವ ಹೊಸ ರಸ್ತೆ ಕ್ಲಿನಿಂಗ್ ಕಾರ್ಯಕ್ರಮ ಭಾನುವಾರ ಜರುಗಿತು. ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಜೆಸಿಐ ಕೋಟ ಸಿನಿಯರ್ ಲಿಜನ್, ಕೋಟ ಗ್ರಾಮ ಪಂಚಾಯಿತಿ, ಎಸ್‌ಎಲ್‌ಆರ್‌ಎಂ ಘಟಕ ಸಹಯೋಗದೊಂದಿಗೆ 247ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಅಂಗವಾಗಿ ಕಾರ್ಯಕ್ರಮ ನಡೆಯಿತು. ಮಣೂರು ವಾರ್ಡ್ ಸದಸ್ಯ ಶಿವರಾಮ ಶೆಟ್ಟಿ ಚಾಲನೆ ನೀಡಿದರು. ಸ್ಥಳೀಯರಾದ ಸತೀಶ್ ಶೆಟ್ಟಿ, ಸುರೇಶ್ ಆಚಾರ್, ರವೀಂದ್ರ ಜೋಗಿ, ಅಜಿತ್ ಆಚಾರ್, ಅಮೃತ್ ಜೋಗಿ, ದಿನೇಶ್ ಆಚಾರ್, ಕೇಶವ ಆಚಾರ್, ಲಲಿತಾ ಪೂಜಾರಿ, ಕಲಾವತಿ ಅಶೋಕ್ ಇದ್ದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net