

ಯಲಬುರ್ಗಾ: ಗ್ರಾಮೀಣ ಮಹಿಳೆಯರು ಮಹಿಳಾ ಸ್ವಸಹಾಯ ಸಂಘದಿಂದ ಸೌಲಭ್ಯ ಪಡೆದು ಮೊಟ್ಟೆ, ಕೋಳಿ ಸಾಕಾಣಿಕೆ ಮಾಡಿದರೆ ಸ್ವಾವಲಂಬಿ ಬದುಕಿಗೆ ಸಹಕಾರಿ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಹೇಳಿದರು.
ಇದನ್ನೂ ಓದಿ:ಕೋಳಿ ಫಾರಂ ಸ್ಥಾಪನೆಗೆ ವಿರೋಧ
ತಾಲೂಕಿನ ಬಂಡಿ ಗ್ರಾಪಂ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘದ ಕೋಳಿ ಫಾರಂಗೆ ಸೋಮವಾರ ಭೇಟಿ ನೀಡಿ ಮಾತನಾಡಿದರು. ಬಂಡಿಯ ಕೋಳಿ ಫಾರಂನಲ್ಲಿ ಉತ್ತಮ ವ್ಯವಸ್ಥೆ ಕಾಪಾಡಿರುವುದು ಒಳ್ಳೆಯ ಸಂಗತಿ. ಎಲ್ಲ ಗ್ರಾಪಂಗಳಲ್ಲಿ ಕೋಳಿ ಫಾರಂ ಮಾಡಿ ಶಾಲೆಗಳಿಗೆ ಮೊಟ್ಟೆ ವಿತರಿಸಿದರೆ ಆರ್ಥಿಕ ಸಬಲರಾಗಲು ಅನುಕೂಲವಾಗಲಿದೆ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ್ ಬಿರಾದಾರ್, ಸಹಾಯಕ ನಿರ್ದೇಶಕ ಹನಮಂತಗೌಡ ಪೊಲೀಸ್ ಪಾಟೀಲ್ ಇತರರಿದ್ದರು.