ಕಾರ್ಮಿಕರಿಗೆ ಸವಲತ್ತುಗಳು ಮರೀಚಿಕೆ

1
ಶಿಡ್ಲಘಟ್ಟದಲ್ಲಿ ಸೆಂಟರ್ ಆಫ್ ಟ್ರೇಡ್ ಯೂನಿಯನ್ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೇ ಡೇ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು. ಲಕ್ಷ್ಮೀದೇವಮ್ಮ, ಫಯಾಜ್, ಪಾಪಣ್ಣ ಮತ್ತಿತರರು ಹಾಜರಿದ್ದರು.
Published on

ಹಕ್ಕುಗಳಿಗಾಗಿ ಹೋರಾಡಬೇಕಿದೆ ಎಂದ ಲಕ್ಷ್ಮೀದೇವಮ್ಮ -ಶಿಡ್ಲಘಟ್ಟದಲ್ಲಿ ಸಿಐಟಿಯುನಿಂದ ದಿನಾಚರಣೆ

ಶಿಡ್ಲಘಟ್ಟ: ಕಾರ್ಮಿಕರ ಶೋಷಣೆ ಮತ್ತು ದುಸ್ಥಿತಿ ಕಾಲಕಾಲಕ್ಕೂ ಬದಲಾಗುತ್ತಾ ಬಂದಿದೆ. ಹಾಗೆಯೇ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳು ಸಹ ಮರೀಚಿಕೆಯಾಗಿವೆ. ನಾವೆಲ್ಲರೂ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಡಬೇಕಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ ತಿಳಿಸಿದರು.

ನಗರದ ಸ್ತ್ರೀಶಕ್ತಿ ಭವನದಲ್ಲಿ ಸೆಂಟರ್ ಆಫ್ ಟ್ರೇಡ್ ಯೂನಿಯನ್ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಮೇ ಡೇ ರ‌್ಯಾಲಿ ಮತ್ತು ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಎಂಟು ಗಂಟೆ ಕೆಲಸದ ಅವಧಿ, ಸೇವೆ ಖಾಯಂ, ನ್ಯಾಯಯುತ ವೇತನ, ಸಂಘ ಕಟ್ಟುವ ಹಕ್ಕು, ಮುಷ್ಕರದ ಹಕ್ಕು ಉಳಿವಿಗಾಗಿ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ ಮತ್ತು ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ರದ್ದು ಮಾಡುವಂತೆರದ್ದಿಗಾಗಿ ಒತ್ತಾಯಿಸುತ್ತಿದ್ದೇವೆ ಎಂದರು.

1948ರಲ್ಲಿ ಜಾರಿಯಾಗಿದ್ದ ಕಾರ್ಮಿಕರ ಕಾನೂನುಗಳನ್ನು ಈಗ ಕೇವಲ ನಾಲ್ಕು ಕೋಡ್‌ಗಳನ್ನಾಗಿ ಕೇಂದ್ರ ಸರ್ಕಾರ ಬದಲಾಯಿಸುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಸೌಲಭ್ಯಗಳಾಗಲೀ, ಹೋರಾಟ ಮಾಡುವ ಹಕ್ಕಾಗಲೀ ಇರುವುದಿಲ್ಲ. ಇದಕ್ಕಾಗಿ ಮೇ 20ರಂದು ಹೋರಾಟ ಹಮ್ಮಿಕೊಂಡಿದ್ದು, ಅಂಗನವಾಡಿ ನೌಕರರು, ಬಿಸಿಯೂಟದ ನೌಕರರು, ಗ್ರಾಮ ಪಂಚಾಯಿತಿ ನೌಕರರು ಭಾಗವಹಿಸಬೇಕು ಎಂದು ಕರೆ ನೀಡಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪಾಪಣ್ಣ, ಉಪನ್ಶಾಸಕರ ಸಂಘದ ಅಧ್ಶಕ್ಷ ಫಯಾಜ್, ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಭಾಗ್ಶಮ್ಮ, ಖಜಾಂಚಿ ಉಮಾ, ಬಿಸಿಯುಟ ನೌಕರರ ಸಂಘಟನೆಯ ನಾಗರತ್ನಾ, ಮಂಜುಳಾ ಮತ್ತಿತರರು ಹಾಜರಿದ್ದರು.

ಅಸಮಾನತೆ ಜೀವಂತ: ಉಪನ್ಶಾಸಕರ ಸಂಘದ ಅಧ್ಶಕ್ಷ ಫಯಾಜ್ ಮಾತನಾಡಿ, ಕಾರ್ಮಿಕರು ಧರ್ಮ, ಭಾಷೆ ಮತ್ತು ಜಾತಿ ಮೀರಿದವರು. ರಾಜ್ಯ ಹಾಗೂ ರಾಷ್ಟ್ರದಲ್ಲಿ ಬದಲಾವಣೆ ತರುವ ಶಕ್ತಿ ಉಳ್ಳವರು. ತ್ಯಾಗ, ಬಲಿದಾನ ಹೋರಾಟದ ಫಲದಿಂದಾಗಿಯೇ ಕಾರ್ಮಿಕರು ಹಕ್ಕು ಪಡೆಯಲು ಸಾಧ್ಯವಾಗಿದೆ. ಜಾಗತೀಕರಣ ನೀತಿಗಳು ಬಡವರ, ಶ್ರಮಿಕರ, ದುಡಿಯುವ ಜನರ ಬದುಕನ್ನು ಕಿತ್ತು ತಿನ್ನುತ್ತಿದೆ. ಶೇ.90ರಷ್ಟು ಇರುವ ದುಡಿವ ಜನರ ಬೆವರಿನ ಗಳಿಕೆಯನ್ನು ಶೇ.10ರಷ್ಟು ಇರುವ ಬಂಡವಾಳಶಾಹಿ ವರ್ಗ ದೋಚುತ್ತಿದೆ. ಹಲವಾರು ಕಾಯ್ದೆಗಳು ಜಾರಿಯಾದರೂ ಅಸಮಾನತೆ ಜೀವಂತವಾಗಿದೆ. ಅಭಿವೃದ್ಧಿ ಎಂದರೆ ಭ್ರಷ್ಟಾಚಾರ ಎನ್ನುವಂತಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net