

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ಜ್ಞಾನದೀಪ ಕಾರ್ಯಕ್ರಮದ ಮೂಲಕ ಶಾಲೆಗಳಿಗೆ ಬೆಂಚು, ಡೆಸ್ಕ್‌ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ್ದು, ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 85 ಸಾವಿರ ರೂ. ಮೌಲ್ಯದ 10 ಸೆಟ್ ಬೆಂಚು ಡೆಸ್ಕ್ ವಿತರಣೆ ಮಾಡಲಾಯಿತು.
ಗ್ರಾಪಂ ಉಪಾಧ್ಯಕ್ಷ ಗೋವರ್ಧನ್ ಜೋಗಿ, ಮಾಜಿ ಅಧ್ಯಕ್ಷ, ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ಜನಜಾಗೃತಿ ವೇದಿಕೆ ಪದಾಧಿಕಾರಿ ವೆಂಕಟೇಶ್ ಶೆಟ್ಟಿ, ಯೋಜನೆ ವಂಡ್ಸೆ ವಲಯ ಮೇಲ್ವಿಚಾರಕ ಚಂದ್ರ ಮಧುವನ, ವಂಡ್ಸೆ ಒಕ್ಕೂಟ ದಾಮೋದರ್, ಗಿರೀಶ್, ನಯನಾ, ಸೇವಾಪ್ರತಿನಿಧಿ ಯಶೋದಾ, ವನಿತಾ, ಮಮತಾ, ನಾಗರತ್ನ, ಮುಖ್ಯಶಿಕ್ಷಕರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.