ಕೋಟ: ಕೊಕ್ಕರ್ಣೆ ಶ್ರೀದುರ್ಗಾ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ 2024-25ರ ಕಾರ್ಯಕ್ರಮದಲ್ಲಿ ಕೋಟದ ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ವಿದ್ಯಾರ್ಥಿನಿ ಅನುಶ್ರೀ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಮೃದ್ಧಿ ಎಸ್.ಮೊಗವೀರ ಕನ್ನಡ ಭಾಷಣದಲ್ಲಿ ದ್ವಿತೀಯ ಹಾಗೂ ಹರ್ಷಿತಾ ರಂಗೋಲಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.