

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಸರ್ಕಾರಿ ಕಟ್ಟಡಗಳನ್ನು ರಾಜಕೀಯ ಲಾಭಗೋಸ್ಕರ ಬಳಸಿಕೊಳ್ಳಲು ಅನುವುಮಾಡಿಕೊಡುವ ಕಾಂಗ್ರೆಸ್‌ನ ಕಾನೂನುಬಾಹಿರ ನಿಲುವನ್ನು ಬಿಜೆಪಿ ವಿರೋಧಿಸುತ್ತದೆ. ಜತೆಗೆ ಬೆಂಬಲ ನೀಡುವ ಎಸ್‌ಡಿಪಿಐಯನ್ನು ಕೂಡ ನಿಷೇಧಿಸಬೇಕಿದ್ದು, ದೇಶದ ವಿನಾಶಕ್ಕೆ ಇವುಗಳೇ ಬುನಾದಿ ಹಾಕುವ ಅಪಾಯವಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಗಂಗೊಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಒಳಗೆ ಕಾನೂನುಬಾಹಿರವಾಗಿ ಪಂಚಾಯಿತಿ ಉಪಾಧ್ಯಕ್ಷ ಅಧಿಕಾರ ಸ್ವೀಕರಿಸುವ ಸಂದರ್ಭ ಮೌಲ್ವಿಗಳ ಮೂಲಕ ನಮಾಜ್ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಶುಕ್ರವಾರ ಗಂಗೊಳ್ಳಿಯ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಸರ್ಕಾರಿ ಕಟ್ಟಡದೊಳಗೆ ಹಿಂದುಗಳ ಕಾರ್ಯಕ್ರಮ ನಡೆದರೆ ವಿರೋಧಿಸುವ ಕಾಂಗ್ರೆಸ್ ಅದೇ ಸರ್ಕಾರಿ ಕಟ್ಟಡದೊಳಗೆ ನಮಾಜ್‌ಗೆ ಅವಕಾಶ ನೀಡುವ ಮೂಲಕ ಹಿಂದುಗಳ ದಮನ ಆರಂಭಿಸಿದೆ. ಇದು ನಿಲ್ಲದಿದ್ದರೆ ಹಿಂದು ಸಮಾಜವೇ ಇಂಥ ಕಾರ್ಯಗಳಿಗೆ ತಡೆ ನೀಡಲಿದೆ ಎಂದು ಶಾಸಕರು ಎಚ್ಚರಿಕೆ ನೀಡಿದರು.
ಶಾಸಕರ ನೇತೃತ್ವದಲ್ಲಿ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ಕುಂದಾಪುರ ತಹಸೀಲ್ದಾರ್ ಮಲ್ಲಿಕಾರ್ಜುನ್ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ ಅವರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಗಂಗೊಳ್ಳಿ ಗ್ರಾಪಂ ಪಿಡಿಒ ಉಮಾಶಂಕರ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ, ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್.ಉಪಸ್ಥಿತರಿದ್ದರು.
ಬಿಜೆಪಿ ಪ್ರಮುಖರಾದ ದೀಪಕ ಕುಮಾರ್ ಶೆಟ್ಟಿ, ರವೀಂದ್ರ ಖಾರ್ವಿ, ಸುರೇಂದ್ರ ಖಾರ್ವಿ, ಉಮಾನಾಥ ದೇವಾಡಿಗ, ವಾಸುದೇವ ದೇವಾಡಿಗ, ಶ್ರೀಧರ ನಾಯ್ಕ, ಮಿಥುನ್ ಎಂ.ಡಿ.ಬಿಜೂರು, ಹರೀಶ ಮೇಸ್ತ, ಚಂದ್ರ ಪಂಚವಟಿ, ರಾಘವೇಂದ್ರ ಗಾಣಿಗ, ಪ್ರೇಮಾ ಪೂಜಾರಿ, ಶಾಂತಿ ಖಾರ್ವಿ, ರಘುನಾಥ ಖಾರ್ವಿ, ನವೀನ ಗಂಗೊಳ್ಳಿ, ಹಿಂದು ಸಂಘಟನೆಗಳ ಕಾರ್ಯಕರ್ತರು, ಗ್ರಾಪಂ ಸದಸ್ಯರು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಧಿಕಾರಕ್ಕಾಗಿ ಕಾಂಗ್ರೆಸ್ ಅಡ್ಡದಾರಿ ಸಹಿತ ಏನನ್ನಾದರೂ ಮಾಡಲು ಸಿದ್ಧವಿದೆ. ಹಿಂದುಗಳಿಗೆ ತೊಂದರೆ ನೀಡಿದರೆ ಹಿಂದು ಸಮಾಜ ಖಂಡಿತ ಸಿಡಿದೇಳಲಿದೆ. ಬೈಂದೂರು ಕ್ಷೇತ್ರದಲ್ಲಿ ಒಂದುವರೆ ವರ್ಷದಿಂದ ಗೋ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಮಸೀದಿಗಳ ಅಕ್ರಮ ನಿರ್ಮಾಣದ ಬಗ್ಗೆ ದೂರು ನೀಡಲಾಗಿದೆ. ಎಸ್‌ಡಿಪಿಐಗೆ ರೆಡ್‌ಕಾರ್ಪೆಟ್ ಹಾಕಿ ಅವರೊಂದಿಗೆ ಮೈತ್ರಿ ಮಾಡಿ ಕಾಂಗ್ರೆಸ್ ಗಂಗೊಳ್ಳಿ ಗ್ರಾಪಂ ಚುನಾವಣೆಯಲ್ಲಿ ಗೆದ್ದಿದೆ. -ಗುರುರಾಜ್ ಗಂಟಿಹೊಳೆ, ಶಾಸಕ https://www.vijayavani.net/blood-donation-free-eye-check-up-camp https://www.vijayavani.net/demand-for-konkan-railway-merger-increases