ಮಾದರಿಯಾದ ಬೆನಕನಹಳ್ಳಿ ಡೇರಿ

19 sep tnp 02
ತಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಗುರುವಾರ ನಡೆಯಿತು. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಚೆಲುವರಾಜು ಹಾಗೂ ನಿರ್ದೇಶಕ ಓಂಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಬಿ.ಎಂ. ಬಸವಣ್ಣ, ಡಾ.ಎಲ್.ಆರ್.ಕರಿಬಸವರಾಜು, ಜಿ.ಮಾದಪ್ಪ, ಬಿ.ಎನ್.ಪ್ರಕಾಶ್, ಆರ್.ಪ್ರಮೋದ್ ಇತರರು ಇದ್ದರು.
Published on

ತಿ.ನರಸೀಪುರ: ಶುಚಿತ್ವಕ್ಕೆ ಆದ್ಯತೆ ಕೊಟ್ಟು ಗುಣಮಟ್ಟದ ಹಾಲನ್ನು ಸರಬರಾಜು ಮಾಡುತ್ತಿರುವ ಬೆನಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ತಾಲೂಕಿಗೆ ಮಾದರಿ ಸಂಘವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮುಲ್)ದ ಅಧ್ಯಕ್ಷ ಆರ್.ಚಲುವರಾಜು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸುಸಜ್ಜಿತ, ಸುರಕ್ಷಿತವಾದ ಕಟ್ಟಡವನ್ನು ಹೊಂದಿರುವ ಬಿಎಂಸಿ ಕೇಂದ್ರದ ನಿರ್ವಹಣೆ ಹೇಗಿರಬೇಕು ಎಂಬುದನ್ನು ಬೆನಕನಹಳ್ಳಿ ಸಂಘದ ಕಟ್ಟಡವನ್ನು ಒಮ್ಮೆಯಾದರೂ ನೋಡಬೇಕು. ಒಕ್ಕೂಟದಿಂದ ವಿಮಾ ಸೌಲಭ್ಯ ಸೇರಿದಂತೆ ಹೈನುಗಾರಿಕೆಗೆ ಅಭಿವೃದ್ಧಿಗೆ ಅಗತ್ಯ ಸಹಕಾರವನ್ನು ಒಕ್ಕೂಟದಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಕಾರ್ಯದರ್ಶಿ ಜಿ.ಮಾದಪ್ಪ ಮಾತನಾಡಿ, 2023-24ನೇ ಸಾಲಿನಲ್ಲಿ ಸಂಘವು 14,24,870 ರೂ. ವಹಿವಾಟು ನಡೆಸಿದ್ದು, ಖರ್ಚು, ವೆಚ್ಚಗಳನ್ನು ಕಳೆದು 3,61,045 ರೂ.ಗಳ ನಿವ್ವಳ ಲಾಭ ಗಳಿಸಿದೆ. ಮುಂದಿನ ಅಂದಾಜು ಬಜೆಟ್ ಹಾಗೂ ಸಹಕಾರಿ ಸಂಘಗಳ ಸಮಗ್ರ ಬೈಲಾ ತಿದ್ದುಪಡಿಯ ಬಗ್ಗೆ ಸಭೆಯಲ್ಲಿ ನಿರ್ದೇಶಕರು ಹಾಗೂ ಹಾಲು ಉತ್ಪಾದಕ ಸದಸ್ಯರು ಅನುಮೋದನೆ ನೀಡಬೇಕು ಎಂದು ಸಭೆಯ ನಡಾವಳಿಯನ್ನು ಮಂಡಿಸಿದರು.

ಮೈಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಸಿ.ಓಂಪ್ರಕಾಶ್ ಮಾತನಾಡಿದರು. ಸಭೆಯಲ್ಲಿ ನಿವೃತ್ತ ಉಪ ವ್ಯವಸ್ಥಾಪಕರಾದ ಡಾ.ಸಿ.ದಿವಾಕರ, ಡಾ.ಕೆ.ಬಿ.ಶಿವಪ್ರಸಾದ್, ಎಐ ಕಾರ್ಯಕರ್ತ ಬಿ.ಮಹದೇವಸ್ವಾಮಿ, ಗುಣಮಟ್ಟದ ಅಧಿಕ ಪ್ರಮಾಣದ ಹಾಲನ್ನು ಸರಬರಾಜು ಮಾಡಿದ ಬಿ.ಎಂ.ಸಿದ್ಧಮಲ್ಲಿಕಾರ್ಜುನಸ್ವಾಮಿ, ಬಿ.ಎಂ.ಗುರುಸ್ವಾಮಿ, ಬಿ.ವಿ.ನಟೇಶ್ ಹಾಗೂ ಸಂಘದ ಕಾರ್ಯದರ್ಶಿ ಜಿ.ಮಾದಪ್ಪ ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ವ್ಯವಸ್ಥಾಪಕ ಎಲ್.ಆರ್. ಕರಿಬಸವರಾಜು, ತಾಲೂಕು ಮೇಲ್ವಿಚಾರಕ ಆರ್.ಪ್ರಮೋದ್, ಮಾರ್ಗ ವಿಸ್ತರಣಾಧಿಕಾರಿ ಸಿ.ಅನಿತಾ, ಸಂಘದ ಅಧ್ಯಕ್ಷ ಬಿ.ಎಂ.ಬಸವಣ್ಣ, ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ನಿರ್ದೇಶಕರಾದ ನಾಗೇಂದ್ರ, ಎಂ.ಗಿರೀಶ್, ಬಿ.ಎಸ್. ಮಹೇಶ್, ಬಿ.ಎಂ.ಶಿವಕುಮಾರಸ್ವಾಮಿ, ಮಹದೇವಸ್ವಾಮಿ, ರಾಜಬುದ್ಧಿ, ಸಿ.ಮರಿಸ್ವಾಮಿ ಶಿವಮ್ಮ, ಗವಿಸಿದ್ದಯ್ಯ, ಸಿ.ಎಂ. ಇಂದ್ರಮ್ಮ, ಶಿವಮ್ಮ, ಹಾಲು ಪರೀಕ್ಷಕ ಬಿ.ಪಿ.ಮಹೇಶ್, ಗುಮಾಸ್ತ ಬಿ.ಎನ್.ಮಹೇಶ್, ಸಹಾಯಕಿ ಹೂವಮ್ಮ ಹಾಗೂ ಹಾಲು ಉತ್ಪಾದಕ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net