ಬೆಳ್ವೆ ಶ್ರೀ ಶಂಕರನಾರಾಯಣ ದೇವಳ ಜಾತ್ರೆ ಸಂಪನ್ನ

belve
Published on

ಬೆಳ್ವೆ: ಬೆಳ್ವೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಶ್ರೀಮನ್ಮಹಾರಥೋತ್ಸವ ಹಾಗೂ ಕೆಂಡೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಸಂಪನ್ನಗೊಂಡಿತು.

ಮುಹೂರ್ತ ಬಲಿ, ಅಂಕುರಾರ್ಪಣೆ, ಧ್ವಜಾರೋಹಣ, ಬೇರಿತಾಡನ, ಕೌತುಕ ಬಂಧನ, ವಾಹನೋತ್ಸವ, ರಂಗಪೂಜೆ, ಹಸಿರು ಹೊರೆಕಾಣಿಕೆ ಸಮರ್ಪಣೆ, ಗರುಡ ವಾಹನೋತ್ಸವ, ಕಟ್ಟೆಪೂಜೆ, ಮಹಾರಂಗ ಪೂಜೆ, ಮನ್ಮಹಾರಥಾರೋಹಣ, ಅನ್ನಸಂತರ್ಪಣೆ, ಶ್ರೀಮನ್ಮಹಾರಥೋತ್ಸವ, ಭೂತ ಬಲಿ, ಶಯನೋತ್ಸವ, ಕವಾಟ ಬಂಧನ, ಕವಾಟ ವಿಸರ್ಜನೆ, ತುಲಾಭಾರ, ಮಹಾ ಪ್ರಸಾದ ವಿತರಣೆ, ಚೂರ್ಣೋತ್ಸವ, ಅವಭೃತ ಸ್ನಾನ, ಧ್ವಜಾವರೋಹಣ, ಪೂರ್ಣಾಹುತಿ, ಪ್ರಸಾದ ವಿತರಣೆ, ಸಂಪ್ರೋಕ್ಷಣೆ, ಗಣಪತಿ ಯಾಗ, ಪ್ರಾಯಶ್ಚಿತ, ಪ್ರಧಾನ ಹೋಮ, ಕುಂಭಾಭಿಷೇಕ, ಕಲ್ಲುಕುಟಿಗ ದೈವದ ಕೋಲ ಸಹಿತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ತಂತ್ರಿ ಸದಾಶಿವ ಭಟ್, ಅರ್ಚಕ ವೃಂದವರು, ಶಂಕರನಾರಾಯಣ ಅಲ್ಸೆ, ಕುಟುಂಬಸ್ಥರು, ಪವಿತ್ರಪಾಣಿ, ಆಡಳಿತ ಮೊಕ್ತೇಸರ ಬಿ.ಶಂಕರ ಶೆಟ್ಟಿ ಬೆಳ್ವೆ, ಮೊಕ್ತೇಸರರಾದ ಶಿರೂರು ಜಯರಾಮ ಶೆಟ್ಟಿ ಯಳಂತೂರು, ಬಿ.ಶಂಕರನಾರಾಯಣ ಐತಾಳ ಬೆಳ್ವೆ, ಬಿ.ಗಣೇಶ್ ಕಿಣಿ ಬೆಳ್ವೆ, ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ಮಮತಾ ಬಿ.ಶೆಟ್ಟಿ ಬೆಳ್ವೆ, ಬಿ.ಉದಯಕುಮಾರ್ ಪೂಜಾರಿ ಬೆಳ್ವೆ, ಮಂಜುನಾಥ ನಾಯ್ಕ ಬೆಳ್ವೆ, ರವಿಜ ವಿ.ಶೆಟ್ಟಿ ಬೆಳ್ವೆ, ಉದ್ಯಮಿ ಬಿ.ಸತೀಶ್ ಕಿಣಿ ಬೆಳ್ವೆ, ರಾಜೇಂದ್ರ ಕಿಣಿ ಬೆಳ್ವೆ, ಎಸ್.ಚಂದ್ರಶೇಖರ್ ಶೆಟ್ಟಿ ಬೆಳ್ವೆ, ವೈ.ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸೇವಾಕರ್ತರು, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net