ಉಡುಪಿ ವರದಿಗಾರ ಸಂದೀಪ ಪೂಜಾರಿ ನಿಧನ

Sandeep Lead
Published on

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವ ಪತ್ರಕರ್ತ

ವಿಜಿಯವಾಣಿ ಸುದ್ದಿಜಾಲ ಉಡುಪಿ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಈಟಿವಿ ಭಾರತ ಉಡುಪಿ ಜಿಲ್ಲಾ ವರದಿಗಾರ ಸಂದೀಪ ಪೂಜಾರಿ (37) ಏ.20ರಂದು ಬೆಳಗ್ಗೆ ನಿಧನರಾದರು.

Sandeep 2
ಸಕಲೇಶಪುರ ಸಮೀಪದ ಬಾಳುಪೇಟೆ ಎಂಬಲ್ಲಿ ಮಾ.29ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಪಘಾತದಿಂದ ಬೆನ್ನು ಹುರಿಗೆ ತೀವ್ರ ಪೆಟ್ಟಾಗಿ ಗಂಭೀರ ಸ್ಥಿತಿಯಲ್ಲಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಕಾಪು ತಾಲೂಕಿನ ಶಿರ್ವ ನಿವಾಸಿಯಾಗಿದ್ದ ಸಂದೀಪ, ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪಬ್ಲಿಕ್​ ಟಿವಿ, ಸ್ಪಂದನಾ ಸುದ್ದಿ ವಾಹಿನಿಯ ಕ್ಯಾಮರಾಮನ್​ ಹಾಗೂ ಬಿಟಿವಿಯ ಕ್ಯಾಮರಾಮನ್​ ಹಾಗೂ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಈಟಿವಿ ಭಾರತ ವಾಹಿನಿಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಲೈವ್​ ವಾಹಿನಿಗಳಾದ ಸಿ4ಯು, ಪೆಮ್​ ಕಾರ್ಲದಲ್ಲಿ ತಂತ್ರಜ್ಞರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಅವರು ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net