

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ ಕಳೆದ ವರ್ಷ ಸದಸ್ಯರು, ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ದಾಖಲೆಯ ಸಮಾಜಮುಖಿ ಕಾರ್ಯಗಳನ್ನು ನಡೆಸಿದೆ. ಸಿಂಧೂರ ಶಾಲೆ, ಶಿಥಿಲಾವಸ್ಥೆಯ ಶಾಲೆಗಳ ನವೀಕರಣ, ಅನೇಕ ಮಾನವೀಯ ಸೇವಾ ಕಾರ್ಯಗಳಲ್ಲಿ ಗುರುತಿಸಿಕೊಂಡಿದೆ ಎಂದು ರೋಟರಿ ಜಿಲ್ಲೆ 3181ರ ನಿಯೋಜಿತ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಹೇಳಿದರು.
ಉಜಿರೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್‌ನ 2025-26ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಪೂರಣ್ ವರ್ಮಾ ಅವರಿಂದ ನೂತನ ಅಧ್ಯಕ್ಷ ಪ್ರಕಾಶ್ ಪ್ರಭು ಹಾಗೂ ತಂಡಕ್ಕೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ಅಸಿಸ್ಟೆಂಟ್ ಗವರ್ನರ್ ಡಾ.ಜಯಕುಮಾರ ಶೆಟ್ಟಿ ಅವರು ಕಿರಣ್ ಹೆಬ್ಬಾರ್ ಸಂಪಾದಕತ್ವದ ರೋಟರ್ ಪತ್ರಿಕೆ ಬಿಡುಗಡೆಗೊಳಿಸಿದರು. ಜೋನಲ್ ಲೆಫ್ಟಿನೆಂಟ್ ಸುರೇಶ ಸಾಲಿಯಾನ್ ಶುಭಹಾರೈಸಿದರು. 2025-26ನೇ ಸಾಲಿನ ಕ್ಲಬ್‌ನ ಆಡಳಿತ ಮಂಡಳಿ ನಿರ್ದೇಶಕರನ್ನು ಗೌರವಿಸಲಾಯಿತು. ಕೆ.ಎಂ.ರಾಧಾಕೃಷ್ಣ, ಡಾ.ಹರ್ಷ, ಪ್ರದೀಪ್ ಕುಮಾರ್ ಶೆಟ್ಟಿ, ಸೋಮಶೇಖರ ಶೆಟ್ಟಿ ಮತ್ತು ಪ್ರತಿಮಾ ಬಿ.ವಿ. ಅವರನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು.
ಅಧ್ಯಕ್ಷ ಪೂರಣ್ ವರ್ಮಾ ಸ್ವಾಗತಿಸಿದರು. ಕಾರ್ಯದರ್ಶಿ ಸಂದೇಶ ರಾವ್ ವರದಿ ಮಂಡಿಸಿದರು. ಡಾ.ಗೋಪಾಲಕೃಷ್ಣ, ರಶ್ಮಿ ಕಾರಂತ್, ಗೀತಾ ಪ್ರಕಾಶ್ ಪ್ರಭು, ಡಾ.ಅನಿತಾ ದಯಾಕರ್, ಅಪರ್ಣ ವಾಟ್ವೆ ಅತಿಥಿಗಳನ್ನು ಪರಿಚಯಿಸಿದರು. ಬಿ.ಕೆ.ಧನಂಜಯ ರಾವ್ ಮತ್ತು ರಾಜಶ್ರೀ ರಾವ್ ಕಾರ್ಯಕ್ರಮ ನಿರೂಪಿಸಿದರು. ಡಾ.ಎಂ.ಎಂ.ದಯಾಕರ್ ವಂದಿಸಿದರು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಪೂರಣ್ ವರ್ಮ, ಸಂದೇಶ್ ರಾವ್, ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಜೈನ್, ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್, ಕಾರ್ಯದರ್ಶಿ ಡಾ.ವಿನಯ ಕಿಶೋರ್, ರಕ್ತ ಸಂಚಯನದ ಶ್ರೀಧರ್ ಕೆ.ವಿ., ಸಿಂಧೂರ ಶಾಲೆ ಪರವಾಗಿ ಅನಂತ ಭಟ್ ಮಚ್ಚಿಮಲೆ ಮತ್ತು ವಿದ್ಯಾಕುಮಾರ್ ಕಾಂಚೋಡು. ಶ್ರೀ ಕೃಷ್ಣಾನುಗ್ರಹ ಸಭಾಭವನದ ಶರತ್ ಕೃಷ್ಣ ಪಡುವೆಟ್ನಾಯ, ವಿದ್ಯಾರ್ಥಿ ಇಂಚರ ಕಾರಂತ್ ಅವರನ್ನು ಗೌರವಿಸಲಾಯಿತು.