

ಬಳ್ಳಾರಿ: ಮಹಾಮಾರಿ ಕರೊನಾ ಎಂಬುದು ಒಂದು ಬೋಗಸ್ ರೋಗ. ಬೇಕಾದರೆ ನೂರು ಮಂದಿ ಕರೊನಾ ರೋಗಿಗಳ ಜತೆಯಲ್ಲಿದ್ದು ಬರುವೆ ಎಂದು ಬಳ್ಳಾರಿ ಭಾಗದ ಪ್ರಭಾವಿ ಸ್ವಾಮೀಜಿಯೊಬ್ಬರು ಸರ್ಕಾರ ಮತ್ತು ವೈದ್ಯರಿಗೆ ಸವಾಲು ಹಾಕಿದ್ದಾರೆ.
ಬಳ್ಳಾರಿಯ ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ ನೇರ ಸವಾಲು ಹಾಕಿದ್ದು, ಕರೊನಾ ಒಂದು ಸುಳ್ಳಿನ ರೋಗ. ನಾ ಎಲ್ಲರಿಗೂ ಸವಾಲು ಹಾಕುವೆ. ನೂರು ಜನ ಕರೊನಾ ರೋಗಿಗಳ ಜೊತೆಯಲ್ಲಿ ಇದ್ದು ಬರುವೆ. ನನಗೆ ಕರೊನಾ ಬರುವುದಿಲ್ಲ. ನಾ ಈಗಲೂ ಹೇಳುವೆ ಯಾರೂ ಮಾಸ್ಕ್ ಹಾಕಬೇಡಿ ಎಂದಿದ್ದಾರೆ.
ನಾನು ಸಮಾಜಕ್ಕೆ ಹೆದರಿ ಮಾಸ್ಕ್ ಹಾಕಿರುವೆ ಹೊರತು ರೋಗಕ್ಕೆ ಹೆದರಿ ಮಾಸ್ಕ್ ಹಾಕಲ್ಲಾ. ಇನ್ನು ಮುಂದೆ ಯಾರು ಮಾಸ್ಕ್ ಹಾಕಬೇಡಿ. ಧೈರ್ಯದಿಂದ ಇರಬೇಕು. ನಾ ಕರೊನಾ ಇರುವಾಗಲೇ ಮಹಾರಾಷ್ಟ್ರ ಹಾಗೂ ಬೆಂಗಳೂರು ಸುತ್ತಾಡಿ ಬಂದಿರುವೆ ಎಂದಿದ್ದಾರೆ.
ಕರೊನಾ ರೋಗ ಎಂಬುದೇ ಸುಳ್ಳು. ಯಾರೂ ಹೆದರಬೇಡಿ. ದುಡ್ಡು ಹೊಡೆಯೋಕೆ ಈ ರೋಗವನ್ನು ವೈಭವಿಕರಣ ಮಾಡಲಾಗಿದೆ. ಪ್ರಧಾನಿಯಿಂದ ಹಿಡಿದು ಗ್ರಾಮ ಪಂಚಾಯತಿ ಸದಸ್ಯನವರೆಗೂ ಈಗ ಆತ್ಮವಿಶ್ವಾಸವಿಲ್ಲ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)