ರೆಮ್ಡಿಸಿವರ್ ಔಷಧ ಎಂದು ಪೊಲಿಯೋ ಲಸಿಕೆ ಕದ್ದು ರಸ್ತೆ ಪಕ್ಕ ಬಿಸಾಡಿ ಹೋದ ಖದೀಮರು

Vaccine
Published on

ಬಳ್ಳಾರಿ: ಮಹಾಮಾರಿ ಕರೊನಾ ವೈರಸ್​ನಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಬಳಸುವ ರೆಮ್ಡಿಸಿವರ್ ಔಷಧ ಅಂದುಕೊಂಡು ಖದೀಮರು ಪೊಲಿಯೋ ಲಸಿಕೆ ಕದ್ದಿರುವ ಘಟನೆ ಅಥಣಿಯಲ್ಲಿ ನಡೆದಿದೆ.

ಕಾಳಸಂತೆಯಲ್ಲಿ ಮಾರಾಟ ಮಾಡುವ ದುರುದ್ದೇಶದಿಂದ ಅಥಣಿಯ ಸರ್ಕಾರಿ ಆಸ್ಪತ್ರೆಯಿಂದ ರಾತೋರಾತ್ರಿ ರೆಮ್ಡಿಸಿವರ್ ಔಷಧಿ ಅಂದುಕೊಂಡು ಖದೀಮರು ಪೊಲಿಯೋ ಲಸಿಕೆ ಕದ್ದಿದ್ದರು.

ಔಷಧವನ್ನು ಸಾಗಿಸುವ ಮಾರ್ಗ ಮಧ್ಯೆ ತಾವು ಕದ್ದಿದ್ದು ಪೊಲಿಯೋ ಲಸಿಕೆ ಎಂದು ಗೊತ್ತಾಗಿ ಎಲ್ಲವನ್ನು ರಸ್ತೆ ಪಕ್ಕದಲ್ಲೇ ಬಿಸಾಡಿ ಹೋಗಿದ್ದಾರೆ. ಅಥಣಿಯ ಸವದಿ ಪ್ಲಾಟ್ ಬಳಿಯ ರಸ್ತೆ ಪಕ್ಕದಲ್ಲಿ ಪೊಲಿಯೋ ವ್ಯಾಕ್ಸಿನ್​ಗಳು ಪತ್ತೆಯಾಗಿವೆ.

ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net