ರಸ್ತೆ ಬದಿ ಸಸಿ ನೆಡುವುದರಿಂದ ಮುಂದೆ ಅಪಾಯ: ಅರಣ್ಯ ಇಲಾಖೆಗೆ ಬರೆಯಲು ನಿರ್ಧಾರ : ಬೆಳಂದೂರು ಗ್ರಾಪಂ ಸಾಮಾನ್ಯ ಸಭೆ

New Project (11)
Published on

ವಿಜಯವಾಣಿ ಸುದ್ದಿಜಾಲ ಕಡಬ

ಬೆಳಂದೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜ್ಯ ಹೆದ್ದಾರಿ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್, ಪೈಪ್‌ಲೈನ್‌ಗಳಿಗೆ ಅರಣ್ಯ ಇಲಾಖೆಯಿಂದ ಸಸಿ ನಾಟಿಯಿಂದಾಗಿ ಮುಂದೆ ಅಪಾಯ ಆಗುವ ಬಗ್ಗೆ ಸದಸ್ಯರು ಚರ್ಚಿಸಿದರು. ಈ ಬಗ್ಗೆ ಅರಣ್ಯ ಇಲಾಖೆಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ಶಾಂತಿಮೊಗರು ದ್ವಾರದ ಸಮೀಪ ಬಸ್ ತಂಗುದಾಣ ಮಾಡುವ ಕುರಿತು ಸಾರ್ವಜನಿಕರ ಅರ್ಜಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪಗೊಂಡು, ಅರ್ಜಿಗೆ ಅನುಮೋದನೆ ನೀಡಲಾಯಿತು. ವಸತಿ ಯೋಜನೆಯಡಿ ವಿವಿಧ ಹಂತದಲ್ಲಿರುವ ಮನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು.

ಗ್ರಾಪಂ ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ವಿಠಲ ಗೌಡ ಅಗಳಿ, ಮೋಹನ್ ಅಗಳಿ, ಜಯರಾಮ ಬೆಳಂದೂರು, ಪಾರ್ವತಿ ಮರಕ್ಕಡ, ಪ್ರವೀಣ್ ಕೆರೆನಾರು, ಹರಿಣಾಕ್ಷಿ ಬನಾರಿ, ಗೀತಾ ಕುವೆತ್ತೋಡಿ, ಉಮೇಶ್ವರಿ ಅಗಳಿ, ತಾರಾ ಅನ್ಯಾಡಿ, ಗೌರಿ ಮಾದೋಡಿ, ಕುಸುಮಾ ಅಂಕಜಾಲು ಉಪಸ್ಥಿತರಿದ್ದರು. ಪಿಡಿಒ ನಾರಾಯಣ್ ಸಭೆ ನಿರ್ವಹಿಸಿದರು. ಲೆಕ್ಕ ಸಹಾಯಕಿ ಸುನಂದಾ ಇಲಾಖೆ ಸುತ್ತೋಲೆ, ಸಾರ್ವಜನಿಕ ಅರ್ಜಿ ಓದಿದರು. ಸಿಬ್ಬಂದಿ ಮಮತಾ, ಗೀತಾ, ಹರ್ಷಿತ್, ಸಂತೋಷ್, ಪ್ರಶಾಂತಿ, ವಿಮಲಾ ಸಹಕರಿಸಿದರು.

ನೀರಿನ ಬಿಲ್ ಪಾವತಿಸಿ

ಪ್ರಾಕೃತಿಕ ವಿಕೋಪದಡಿ ಹಾನಿ ಉಂಟಾಗಿರುವ ಬಗ್ಗೆ ತುರ್ತು ಕ್ರಮ ಜರುಗಿಸುವಂತೆ ನಿರ್ಣಯಿಸಲಾಯಿತು. ನೀರು ಸರಬರಾಜು ಬಳಕೆದಾರರು ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ, ನೀರಿನ ಬಿಲ್ ಪಾವತಿ ಮಾಡಲು ಬಾಕಿ ಇರುವವರು ಕಡ್ಡಾಯವಾಗಿ ಪಾವತಿ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net