ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಸುಧಾರಾಣಿಯ ಬರ್ಬರ ಹತ್ಯೆ

Death case
Published on

ಬೆಳಗಾವಿ:ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಹರಿತವಾದ ಆಯುಧ (ತಲವಾರ)ದಿಂದ ಮಹಿಳೆಯನ್ನು ಕೊಚ್ಚಿ ಹತ್ಯೆ ಮಾಡಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಕೊಲೆಯಾಗಿರುವ ಮಹಿಳೆ ಬೈಲಹೊಂಗಲ ತಾಲೂಕು ಮೂಗ ಬಸವ ಗ್ರಾಮದ ಸುಧಾರಾಣಿ ಎಂದು ಗುರುತಿಸಲಾಗಿದೆ. ಈರಣ್ಣ ಬಾಬು ಜಗಜಂಪಿ ಕೊಲೆ ಮಾಡಿದ ಆರೋಪಿ. ಬುಧವಾರ ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾಂಟೀನ್​  ಬಳಿ ಇಂದು ಬೆಳಗ್ಗೆ ಈ ಕೊಲೆ ನಡೆದಿದೆ. ಸುಧಾರಾಣಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ಕಾರ್ಯ ಮಾಡುತ್ತಿದ್ದಳು.

ಇದು ಪ್ರೀತಿ ಹಾಗೂ ಹಣಕಾಸಿನ ವ್ಯವಹಾರವಾಗಿ ಕೊಲೆ ನಡೆದಿದೆ ಎಂದು ಗೊತ್ತಾಗಿದೆ. ಆರೋಪಿ ಬಿಸಿದ ತಲವಾರದ ಹೊಡೆತಕ್ಕೆ ಮೃತ ಮಹಿಳೆಯ ಮುಖ ಸೇರಿ ಶರೀರದ ಕೆಲವು ಭಾಗ ಛಿದ್ರವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net