ಗ್ರಾಮಸ್ಥರ ಭಕ್ತಿ ಎಲ್ಲರಿಗೂ ಮಾದರಿ

29Belagavi1
Published on

ಬೆಳಗಾವಿ: ಾನದ ಬಲದಿಂದ ಮಾತ್ರ ಅಾನ ತೊಲಗಲು ಸಾಧ್ಯ. ಹಾಗಾಗಿ ಎಲ್ಲರೂ ಶಿಣ ಪಡೆದುಕೊಂಡು ಾನವಂತರಾಗಬೇಕು ಎಂದು ಅವರಾದಿ ಶ್ರೀ ಫಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ ಹೇಳಿದರು.

ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಶ್ರೀ ಫಲಹಾರೇಶ್ವರ ಶಾಖಾ ಮಠದಲ್ಲಿ ಶ್ರಾವಣ ನಿಮಿತ್ತ ಹಮ್ಮಿಕೊಂಡಿದ್ದ ಬಂಥನಾಳದ ಸಂಗನಬಸವ ಸ್ವಾಮೀಜಿ ಪ್ರವಚನ ಮಂಗಳೋತ್ಸವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆ. ಸಾಂಪ್ರದಾಯವನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಹೋಗುತ್ತಿರುವ ಹಂಚಿನಾಳ ಗ್ರಾಮಸ್ಥರ ಭಕ್ತಿ ಎಲ್ಲರಿಗೂ ಮಾದರಿ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಬಿ.ಎಚ್​.ಕ್ಯಾರಕೊಪ್ಪ ಮಾತನಾಡಿ, ಎಲ್ಲರೂ ಬಸವ ತತ್ತ್ವ ಪರಿಪಾಲನೆ ಮಾಡಬೇಕು. ಚಿಂತೆ ಮಾಡುವುದನ್ನು ಬಿಟ್ಟು ಮುಂದಿನ ಕೆಲಸಗಳ ಬಗ್ಗೆ ಗಮನ ಹರಿಸಬೇಕು. ಪ್ರವಚನದ ಸಾರ ಅರಿತು ಅದರಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ಬೆಳಗ್ಗೆ ಶ್ರೀಫಲಹಾರೇಶ್ವರ ಕರ್ತೃ ಗದ್ದುಗೆಗೆ ಅಭಿಷೇಕ, ಅಲಂಕಾರ, ಕುಂಭಮೇಳ ಹಾಗೂ ಸಕಲ ವಾದ್ಯಮೇಳದೊಂದಿಗೆ ಫಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ ಮಹಾಪ್ರಸಾದ, ಸಂಜೆ ವೇಧಿಕೆ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಪ್ರವಚನಕಾರ ಬಸಯ್ಯ ಹಿರೇಮಠ, ಮಲ್ಲಪ್ಪ ಹೂಗಾರ, ನೀಲಕಂಠಪ್ಪ ಅಂಗಡಿ, ಸೋಮಯ್ಯ ಬೆಳವಟಗಿಮಠ, ಈರಣ್ಣ ಜಾಡರ, ಪರ್ವತಗೌಡ ಪಾಟೀಲ, ಈರಣ್ಣ ವಾಳೇದ, ನಾಗಪ್ಪ ಹೂಗಾರ, ಜಗದೀಶ. ಅಗಡಿ, ಸುರೇಶ ಲಮಾಣಿ, ಹೇಮಣ್ಣ ಕಂಬಳಿ, ಶಂಕ್ರಪ್ಪ ದಾಸಗೌಡರ, ಬಾಳಪ್ಪ ಉಳ್ಳಿಗೇರಿ, ಲಕ್ಮಣ ಗಾಣಿಗೇರ, ಕುಮಾರ ಉಪ್ಪಾರ, ಭೀಮಸಿ ತನ್ನಪ್ಪನವರ, ಏಕನಗೌಡ ಭಿಷ್ಟನಗೌಡರ, ಶಾವಲಬೇಗ್​ ಮುಲ್ಲಾ, ಮಹಾದೇವಪ್ಪ ಶಿರೂರ, ಮೈಲಾರಿ ಕರನಿಂಗನವರ, ರಾಜು ಬಡಿಗೇರ, ನಿಂಗಪ್ಪ ಉಪ್ಪಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net