ಬೆಳವಡಿ ಮಲ್ಲಮ್ಮಳ ದೇಶಪ್ರೇಮ ಅನುಕರಣೀಯ

1blh1
Published on

ಬೈಲಹೊಂಗಲ: ವೀರರಾಣಿ ಬೆಳವಡಿ ಮಲ್ಲಮ್ಮಳ ಶೌರ್ಯ, ಸಾಹಸದ ಸಮಗ್ರ ಇತಿಹಾಸ ರಾಷ್ಟ್ರಾದ್ಯಂತ ಪ್ರಸಾರವಾಗಬೇಕಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಚನ್ನಮ್ಮ ಅಧ್ಯಯನ ಪೀಠದ ಅಧ್ಯೆ ನಾಗರತ್ನಾ ಪರಾಂಡೆ ಹೇಳಿದರು.

ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ರಾಣಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಹಮ್ಮಿಕೊಂಡಿದ್ದ ಬೆಳವಡಿ ಮಲ್ಲಮ್ಮ ಉತ್ಸವದ ವಿಚಾರ ಸಂಕಿರಣದಲ್ಲಿ ಶನಿವಾರ ಮಹಿಳಾ ಸಬಲೀಕರಣಕ್ಕೆ ಬೆಳವಡಿ ಮಲ್ಲಮ್ಮ ಕೊಡುಗೆ ವಿಷಯ ಕುರಿತು ಉಪನ್ಯಾಸ ನೀಡಿದರು.

ಮಲ್ಲಮ್ಮ ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಿಳಾ ಸೈನ್ಯ ಕಟ್ಟಿ ರಾಜ್ಯಾಡಳಿತ ಮಾಡಿದಳು. 17ನೇ ಶತಮಾನದಲ್ಲೇ ತನ್ನ ನಾಡಿಗೆ ಆಪತ್ತು ಬಂದಾಗ ಶತ್ರು ಸೈನ್ಯ ಬಲಾಢ್ಯವಾಗಿದ್ದರೂ ಎದೆಗುಂದದೆ ದಿಟ್ಟತನದಿಂದ ಹೋರಾಡಿದ ರಾಣಿ ಮಲ್ಲಮ್ಮಳ ದೇಶಪ್ರೇಮ ಹಾಗೂ ಆತ್ಮ ಸ್ಥೆರ್ಯ ಎಲ್ಲರಿಗೂ ಮಾದರಿ ಎಂದರು.

ಹಿರಿಯ ಸಾಹಿತಿ ಡಾ.ರವೀಂದ್ರ ತೋಟಗೇರ ಮಾತನಾಡಿ, ನಾವೆಲ್ಲರೂ ಮೊದಲು ಭಾರತೀಯರು ಎಂಬ ಅಭಿಮಾನ ಮೂಡಿದರೆ ಭಾಷೆ, ಮತ, ಪಂಥ ಹಾಗೂ ಗಡಿಗಳ ವಿಚಾರದಲ್ಲಿ ದ್ವೇಷ ಅಸೂಯೆ ಉದ್ಭವಿಸುವುದಿಲ್ಲ. ಮಲ್ಲಮ್ಮ, ಶಿವಾಜಿಯ ಸಹೋದರತ್ವ ಅನುಕರಣೀಯ ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿದ ರಾಜ್ಯ ಮುಜರಾಯಿ ಇಲಾಖೆ ನಿರ್ದೇಶಕ ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಮಾತನಾಡಿ, ಇತಿಹಾಸಕಾರರು, ಸಂಶೋಧಕರು ಬೆಳವಡಿ ಸಂಸ್ಥಾನದ ಸಮಗ್ರ ಇತಿಹಾಸ ಅಧ್ಯಯನ ಮಾಡಿ ಬೆಳವಡಿ ಮಲ್ಲಮ್ಮಳ ಕುರಿತ ಕುರುಹುಗಳ ಸಂರಣೆಗೆ ಒತ್ತು ನೀಡಬೇಕಿದೆ. ರಾಣಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ಚರ್ಚಿಸಲು ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದೊಯ್ಯಲು ಶ್ರಮಿಸುವುದಾಗಿ ತಿಳಿಸಿದರು.

ವಕೀಲ ಸಿ.ಎಸ್​.ಚಿಕ್ಕನಗೌಡರ ಆಶಯ ನುಡಿ ಹೇಳಿದರು. ಗ್ರಾಪಂ ಅಧ್ಯ ಚಂದ್ರಶೇಖರಯ್ಯ ಕಾರಿಮನಿ ಮಾತನಾಡಿದರು. ಬಿಇಒ ಎ.ಎನ್​.ಪ್ಯಾಟಿ, ಗ್ರೇಡ್​&2 ತಹಸೀಲ್ದಾರ್​ ಬಿ.ಜಿ.ಕುಲಕರ್ಣಿ, ಬಿಆರ್​ಪಿ, ಸಿಆರ್​ಪಿಗಳು, ಶಿಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮಾಜ ಸೇವಕ ಪ್ರಕಾಶ ಹುಂಬಿ ಸ್ವಾಗತಿಸಿದರು. ಶಿಕ ಶಿವಪ್ಪ ಹುಂಬಿ ನಿರೂಪಿಸಿದರು. ಪತ್ರಕರ್ತ ಯಾಸೀನ್​ ಕಿತ್ತೂರ ವಂದಿಸಿದರು.

"ವೀರರಾಣಿ ಬೆಳವಡಿ ಮಲ್ಲಮ್ಮಳಿಂದ ನಾಡು ಹೆಸರಾಗಿದೆ. ಮಲ್ಲಮ್ಮಳ ಆದರ್ಶ, ಮೌಲ್ಯಗಳು, ತತ್ತ$$$್ವ ಸಿದ್ಧಾಂತ ಎಲ್ಲರಿಗೂ ಸ್ಫೂರ್ತಿ."

> ಪ್ರಭುನೀಲಕಂಠ ಸ್ವಾಮೀಜಿ, ಮೂರುಸಾವಿರಮಠ ಬೈಲಹೊಂಗಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net