ಬೆಳಂದೂರು ಪ್ರಗತಿ ಸಂಜೀವಿನಿ ಒಕ್ಕೂಟ ಮಹಾಸಭೆ

Kbd_Mahasabha
Published on

ಕಡಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಂಗಳೂರು, ತಾಲೂಕು ಪಂಚಾಯಿತಿ ಕಡಬ, ಪ್ರಗತಿ ಸಂಜೀವಿನಿ ಒಕ್ಕೂಟ ಬೆಳಂದೂರು ಗ್ರಾಮ ಪಂಚಾಯಿತಿ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಬರೆಪಾಡಿಯಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷೆ ಕಾವ್ಯ ಬಿ.ಕೆ. ಅಧ್ಯಕ್ಷತೆ ವಹಿಸಿ ಚಾಲನೆ ನೀಡಿದರು. ಬೆಳಂದೂರು ಗ್ರಾಪಂ ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಪಿಡಿಒ ನಾರಾಯಣ್, ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಉಮೇಶ್ವರಿ ಅಗಳಿ, ತಾಲೂಕು ಅಭಿಯಾನ ನಿರ್ವಹಣಾ ಘಟಕದ ತಾಲೂಕು ವ್ಯವಸ್ಥಾಪಕಿ ನಳಿನಾಕ್ಷಿ, ಸಾಂತ್ವನ ಕೇಂದ್ರದ ನಿಶಾಪ್ರಿಯ ಮಾಹಿತಿ ನೀಡಿದರು. ಒಕ್ಕೂಟದ ಕಾರ್ಯದರ್ಶಿ ವಾರಿಜ ವಾರ್ಷಿಕ ವರದಿಯನ್ನು, ಒಕ್ಕೂಟದ ಸದಸ್ಯೆ ಸೀಮಾ ಲೆಕ್ಕಪತ್ರ ಓದಿದರು. ಒಕ್ಕೂಟದ ಅಧ್ಯಕ್ಷೆ ಕಾವ್ಯ ಸ್ವಾಗತಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ: ಪ್ರಗತಿ ಸಂಜೀವಿನಿ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕಮಲ ಪುರಂದರ, ಉಪಾಧ್ಯಕ್ಷರಾಗಿ ನಳಿನಿ, ಕಾರ್ಯದರ್ಶಿಯಾಗಿ ವಿನೀತಾ, ಜತೆಕಾರ್ಯದರ್ಶಿಯಾಗಿ ಕೇಶವತಿ, ಕೋಶಾಧಿಕಾರಿಯಾಗಿ ಮೋಹಿನಿ ಹಾಗೂ ಉಪಸಮಿತಿ ಸದಸ್ಯರಾಗಿ ಅಮಿತಾ, ಪಾರ್ವತಿ, ಲೀಲಾವತಿ, ಕುಸುಮಾವತಿ, ಗೀತಾ ಕೆ. ಎಸ್, ಜಯಶ್ರೀ, ಸವಿತಾ, ಆರತಿ, ಸುಜಾತ, ಮೋಹಿನಿ ಆಯ್ಕೆಯಾದರು. ತಾಲೂಕು ಅಭಿಯಾನ ನಿರ್ವಹಣಾ ಘಟಕದ ತಾಲೂಕು ವ್ಯವಸ್ಥಾಪಕಿ ನಳಿನಾಕ್ಷಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net