

ಬೆಂಗಳೂರು: ಪ್ರಸ್ತುತ ಕಾಲಟ್ಟದಲ್ಲಿ ಎಲ್ಲರೂ ಮೊಬೈಲ್ನ ಭ್ರಾಮಕ ಲೋಕದಲ್ಲಿ ತೇಲಾಡುತ್ತಿದ್ದು, ವಾಸ್ತವ ಲೋಕದಿಂದ ದೂರ ಉಳಿಯುತ್ತಿದ್ದಾರೆ. ಮಾನವ ಸಂಬಂಧಗಳ ನಡುವೆ ಮೊಬೈಲ್ ಗೋಡೆಯಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಡಾ. ಪದ್ಮರಾಜ ದಂಡಾವತಿ ಹೇಳಿದ್ದಾರೆ.
ಅಖಿಲ ಕರ್ನಾಟಕ ಕುವೆಂಪು ಸಾಂಸತಿಕ ವೇದಿಕೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಸಾಪದ ಮಾಜಿ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಅವರ "ಬೆಳಕಿನೆಡೆಗೆ' ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊಬೈಲ್ ಗೀಳಿನಿಂದ ಮನುಷ್ಯರ ಬುದ್ಧಿ, ಮನಸ್ಸು ವಿಕಾರವಾಗಿದ್ದು, ಕ್ರೌರ್ಯ ಹೆಚ್ಚಾಗಿದೆ. ಮೊಬೈಲ್ ಸಂಸತಿಯ ವಿರುದ್ಧವಾಗಿ ಮುಂದಿನ ತಲೆಮಾರಿನ ಜನರಿಗೆ ಓದುವ ಹವ್ಯಾಸ ಬೆಳೆಸುವ ದಿಕ್ಕಿನಲ್ಲಿ ಪೋಷಕರು ಪ್ರಯತ್ನ ಮಾಡಬೇಕು. ಸಾಹಿತ್ಯ ಓದಿಕೊಂಡವರು ಕ್ರೂರಿಗಳು ಆಗಲಾರರು ಎಂದು ಹೇಳಿದರು.
ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯ ಟಿ. ಸತೀಶ್ ಜವರೇಗೌಡ ಮಾತನಾಡಿ, ಸಾಹಿತಿಗೆ ವರ್ತಮಾನದ ಅರಿವಿನ ಜತೆಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಅಂತರಂಗದ ಒಳಗಣ್ಣನ್ನು ತೆರೆದು ಬದುಕನ್ನು ಗ್ರಹಿಸಬೇಕು. ಆಗ ಸೃಜನಶೀಲ ಬರಹ ಸೃಷ್ಟಿಯಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯ ಡಾ. ಮನು ಬಳಿಗಾರ್ ಪುಸ್ತಕ ಲೋಕಾರ್ಪಣೆ ಮಾಡಿದರು. ಸಂಸತಿ ಚಿಂತಕಿ ಶಿಲ್ಪ ಭಾಸ್ಕರ್, ಕೃತಿಯ ಕರ್ತೃ ಪಿ. ಮಲ್ಲಿಕಾರ್ಜುನಪ್ಪ, ಅಖಿಲ ಕರ್ನಾಟಕ ಕುವೆಂಪು ಸಾಂಸತಿಕ ವೇದಿಕೆ ಅಧ್ಯಕ್ಷ ಟಿ. ಸುರೇಶ್, ಸಾಹಿತಿ ಡಾ. ಕಾಂತರಾಜಪುರ ಸುರೇಶ್ ಮತ್ತಿತರರಿದ್ದರು.