ಬೆಳಗಾವಿಯಲ್ಲಿ ಸುಗಮವಾಗಿ ನಡೆದ ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆ

ನಗರದ 34 ಕೇಂದ್ರಗಳಲ್ಲಿ ನಡೆದ ಎಕ್ಸಾಂ
ಬೆಳಗಾವಿ ನಗರದಲ್ಲಿ ನಡೆದ ಕೆಪಿಎಸ್ಸಿ ಪರೀಕ್ಷೆ ಕೇಂದ್ರದ ಬಳಿ ಅಭ್ಯರ್ಥಿಗಳು ಸೂಚನ ಫಲಕದಲ್ಲಿ ತಮ್ಮ ನೊಂದಣಿ ಸಂಖ್ಯೆ ನೋಡುತ್ತಿರುವುದು. 
ಬೆಳಗಾವಿ ನಗರದಲ್ಲಿ ನಡೆದ ಕೆಪಿಎಸ್ಸಿ ಪರೀಕ್ಷೆ ಕೇಂದ್ರದ ಬಳಿ ಅಭ್ಯರ್ಥಿಗಳು ಸೂಚನ ಫಲಕದಲ್ಲಿ ತಮ್ಮ ನೊಂದಣಿ ಸಂಖ್ಯೆ ನೋಡುತ್ತಿರುವುದು. 
Published on: 

ಸುಗಮವಾಗಿ ನಡೆದ ಕೆಪಿಎಸ್ಸಿ ಪರೀಕ್ಷೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
 ಕರ್ನಾಟಕ ಲೋಕಸೇವಾ ಆಯೋಗದಿಂದ(ಕೆಪಿಎಸ್‌ಸಿ) ನಗರದ ೩೪ ಕೇಂದ್ರಗಳಲ್ಲಿ ಭಾನುವಾರ ಜರುಗಿದ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ನಡೆದಿದೆ.
ಭಾನುವಾರ ಬೆಳಿಗ್ಗೆ ನಡೆದ ಪರೀಕ್ಷೆಗೆ ಒಟ್ಟು ೧೨೨೪೪ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ೭೪೩೦ ಅಭ್ಯರ್ಥಿಗಳು ಹಾಜರಾದರೆ, ೪೮೧೪ ಅಭ್ಯರ್ಥಿಗಳು ಗೈರಾಗಿದ್ದರು.ಹಾಗೂ ಮಧ್ಯಾಹ್ನ ನಡೆದ ಪರೀಕ್ಷೆಗೆ ೧೨೨೪೪ ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದರು.ಅದರಲ್ಲಿ ೭೪೦೨ ಅಭ್ಯರ್ಥಿಗಳು ಹಾಜರಾರು. ೪೮೪೨ ಅಭ್ಯರ್ಥಿಗಳು ಪರೀಕ್ಷೆ ಗೈರಾದರು.
ಪರೀಕ್ಷೆ ಕೇಂದ್ರದ ಸುತ್ತ ಬೀಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳನ್ನು ಪೊಲೀಸರು ತಪಾಸಣೆ ನಡೆಸಿ ಪರೀಕ್ಷೆ ಕೇಂದ್ರದೊಳಗೆ ಪ್ರವೇಶ ನೀಡಿದರು. ಅಭ್ಯರ್ಥಿಗಳ ಕಿವಿಗಳನ್ನು ತಜ್ಞ ವೈದ್ಯರು ತಪಾಸಿಸಿದರು.ಹಾಗೂ ಪರೀಕ್ಷೆಗೆ ಬರೆಯು ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ಉಪಕರಣ ಬಳಸದಂತೆ ಸೂಚಿಸಲಾಗಿತ್ತು.
ಪರೀಕ್ಷೆ ಪತ್ರಿಕೆಗಳನ್ನು ಪೊಲೀಸ್ ಬೀಗಿ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತ ೨೫೦ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಪರೀಕ್ಷೆಗೆ ಗೊಂದಲವಾಗದಂತೆ ಕ್ರಮ ವಹಿಸಲಾಗಿತ್ತು. ಪರೀಕ್ಷೆಯು ಸುಗಮವಾಗಿ,ಶಾಂತಿಯುತವಾಗಿ ನಡೆದಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಂ.ಕಾಂಬಳೆ ತಿಳಿಸಿದ್ದಾರೆ.