ಬೆಳಗಾವಿ: ನಗರದಲ್ಲಿ ಎರಡು ದಿನಗಳ ಹಿಂದೆ ಪೆಟ್ರೋಲ್ ಅಭಾವದ ವದಂತಿ ಹಿನ್ನೆಲೆ ಬಂಕ್‌ವೊಂದರಲ್ಲಿ ದಟ್ಟಣೆ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಯುವಕರ ಮಧ್ಯೆ ಹೊಡೆದಾಟವಾಗಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲಿ, ಯುವಕರನ್ನು ಮಾಳಮಾರುತಿ ಠಾಣೆಗೆ ಕರೆಯಿಸಿ ಕ್ಷಮಾಪಣೆ ಕೋರುವಂತೆ ಮಾಡಲಾಗಿದೆ.
ಸೋಮವಾರ ರಾತ್ರಿ ನೆಹರೂ ನಗರದಲ್ಲಿನ ಪೆಟ್ರೋಲ್ ಬಂಕ್‌ಗೆ ನೂರಾರು ಸಂಖ್ಯೆಯಲ್ಲಿ ವಾಹನ ಸವಾರರು ಮುಗಿಬಿದ್ದಿದ್ದರು. ಈ ವೇಳೆ ತಾ ಮುಂದೆ, ನಾ ಮುಂದೆ ಎನ್ನುವ ಪೈಪೋಟಿಯಲ್ಲಿ ಇಬ್ಬರು ಬೈಕ್ ಸವಾರರ ಮಧ್ಯೆ ಹೊಡೆದಾಟವಾಗಿತ್ತು. ಇಬ್ಬರು ಯುವಕರು ಎದುರಿನ ವ್ಯಕ್ತಿಗೆ ಹೊಡೆದಿದ್ದರು.
ಇದನ್ನು ಅಲ್ಲಿಯೇ ಇದ್ದವರು ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಹಲ್ಲೆ ನಡೆಸಿದವರನ್ನು ಪತ್ತೆ ಮಾಡಿರುವ ಮಾಳಮಾರುತಿ ಠಾಣೆ ಪೊಲೀಸರು ಸಾರ್ವಜನಿಕವಾಗಿ ಗಲಾಟೆ ಮಾಡಿಕೊಂಡವರಿಂದ ಕ್ಷಮೆಯಾಚಿಸುವಂತೆ ಮಾಡಿ, ಬುದ್ಧಿಮಾತು ಹೇಳಿ ಕಳುಹಿಸಿಕೊಟ್ಟಿದ್ದಾರೆ.
ಈಗ ಗಲಾಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಇಬ್ಬರು ಯುವಕರು ಹೊಡೆಯುತ್ತಿರುವ ವಿಡಿಯೋ ಹಾಗೂ ಗಲಾಟೆಯ ನಂತರ ಠಾಣೆಯಲ್ಲಿ ಕೈಮುಗಿದು ನಿಂತ ಫೋಟೋಗಳನ್ನು ಸೇರಿಸಿ, ಹೊಸ ರೀಲ್ಸ್ ಸೃಷ್ಟಿಸಲಾಗಿದ್ದು, ಇದು ವೈರಲ್ ಆಗಿದೆ.