ಹಣಕಾಸಿನ ವ್ಯವಹಾರ ಜಗಳದಲ್ಲಿ ಯುವಕ ಕೊಲೆ

ರಾಹುಲ ತಳವಾರ
ರಾಹುಲ ತಳವಾರ
Published on
ಬೆಳಗಾವಿ: ಹಣದ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಯುವಕನೋರ್ವನನ್ನು ತಲವಾರದಿಂದ ಹೊಡೆದು ಕೊಲೆ ಮಾಡಿರುವ ಟನೆ ತಾಲೂಕಿನ ಹುಂಚ್ಯಾನಟ್ಟಿ ಹೊರವಲಯದ ರ್ನಿಜನ ಪ್ರದೇಶದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಮಜಗಾವಿಯ ರಾಹುಲ ತಳವಾರ (22) ಕೊಲೆಯಾದ ಯುವಕ. ಈತನಿಂದ ಹಣ ಪಡೆದುಕೊಂಡಿದ್ದ ಸ್ನೇಹಿತರು ಹಣ ಕೊಡುತ್ತೇವೆ ಬಾ ಎಂದು ಕರೆಯಿಸಿಕೊಂಡಿದ್ದಾರೆ. ಎಲ್ಲರೂ ಪರಿಚಯಸ್ಥರೇ ಆಗಿದ್ದರಿಂದ ಯಾವುದೇ ಸಂಶಯವಿಲ್ಲದೇ ತೆರಳಿದ್ದ ರಾಹುಲ ಜತೆಗೆ ಮೊದಲಿಗೆ ಮಾತುಕತೆ ನಡೆದಿದೆ. ಈ ವೇಳೆ ವಾಗ್ವಾದ ನಡೆದು ತಲ್ವಾರನಿಂದ ರಾಹುಲ ತಲೆ ಮತ್ತು ಕೈಗೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡಿದ್ದ ರಾಹುಲನನ್ನು ಬಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾಗಿದ್ದಾನೆ.
ಹಣ ಕೊಡುವುದಾಗಿ ಕರೆಯಿಸಿಕೊಂಡು ಕೊಲೆ ಮಾಡಿದ್ದಾರೆ ಎಂದು 9 ಜನರ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆದಿದೆ ಎಂದು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹೆರಾಯಿನ್​ ವಶ: ತಾಲೂಕಿನ ಮುತಾಗಾ&ಶಿಂದೊಳ್ಳಿ ರಸ್ತೆ ಪಕ್ಕದ ಗಿಡಗಂಟಿಗಳ ಮಧ್ಯ ನಿಂತು ಹೆರಾಯಿನ್​ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ಮಾಡಿರುವ ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು, ಶಿಂದೊಳ್ಳಿಯ ಸಮೀರ್​ ಮಹಮ್ಮದ್​ ಮುಲ್ಲಾ (21) ನನ್ನು ಬಂಧಿಸಿ 3.28 ಲಕ್ಷ ರೂ. ಮೌಲ್ಯದ 16.40 ಗ್ರಾಂ. ಹೆರಾಯಿನ್​ ವಶಪಡಿಸಿಕೊಂಡಿದ್ದಾರೆ. ಈತನ ವಿಚಾರಣೆಯಲ್ಲಿ ಮುಂಬೈನ ಸಾವಂತಿ ಎಂಬಾಕೆಯಿಂದ ತಂದಿರುವುದಾಗಿ ಹೇಳಿದ್ದು, ಈಕೆಯ ವಿರುದ್ಧವೂ ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.
ಬೆಟ್ಟಿಂಗ್​ ದಾಳಿ: ಹಳೇ ತರಕಾರಿ ಮಾರುಕಟ್ಟೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಬೆಟ್ಟಿಂಗ್​ ನಡೆಸುತ್ತಿದ್ದಾಗ ದಾಳಿ ಮಾಡಿರುವ ಮಾರ್ಕೆಟ್​ ಠಾಣೆ ಪೊಲೀಸರು ಕೋನವಾಳ ಗಲ್ಲಿಯ ವಿಶಾಲ ಆದಿನಾಥ ಗೌರಗೊಂಡ (43) ನನ್ನು ಬಂಧಿಸಿದ್ದಾರೆ. ಈತ ಉತ್ತಮ ರವಿ ಜಾಧವ ಎಂಬಾತನಿಂದ ಮೊಬೈಲ್​ ಬಳಸಿಕೊಂಡು ಐಪಿಎಲ್​ ಆಟದ ಮೇಲೆ ಸಾರ್ವಜನಿಕಂದ ಹಣ ತೊಡಗಿಸಿಕೊಂಡು ಆನ್​ಲೈನ್​ ಬೆಟ್ಟಿಂಗ್​ ಆಡಿಸುತ್ತಿರುವುದನ್ನು ಒಪ್ಪಿಕೊಂಡಿದ್ದು, ರವಿ ವಿರುದ್ಧವೂ ಪ್ರಕರಣ ದಾಖಲಿಸಿ, ಒಟ್ಟು ರೂ. 5,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net